ಪುತ್ತೂರು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಪ್ರತಿ ಮನೆಯಲ್ಲೂ ಪುಟ್ಟ ಗ್ರಂಥಾಲಯವಿರಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಆಶಾ ಬೆಳ್ಳಾರೆ ಹೇಳಿದರು.
ಅವರು ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ನಡೆದ 109ನೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ,, 1915 ಮೇ 5 ರಂದು ಸ್ಥಾಪನೆಗೊಂಡು ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ಬಗ್ಗೆ ಹಾಗೂ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷತೆಯ ಕುರಿತಾಗಿ ಉಪನ್ಯಾಸ ನೀಡಿದರು.
ಸಂತ ಫಿಲೋಮೀನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಕುಮಾರ ಮೊಳೆಯಾರ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಕಿವಿ ಮಾತನ್ನ ಹೇಳಿ ಶುಭ ಹಾರೈಸಿದರು
ಮುಖ್ಯ ಅತಿಥಿಯಾಗಿ ಮಾನಕ ಜ್ಯುವೆಲ್ಲರ್ಸ್ ಮಾಲಕರಾದ ಸಿದ್ಧನಾಥ ಶುಭ ಹಾರೈಸಿದರು
ಪ್ರಗತಿ ಸ್ಟಡಿ ಸೆಂಟರ್ ನ ಸಂಚಾಲಕ ಗೋಕುಲನಾಥ್ ಮತ್ತು ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್ ಅತಿಥಿಗಳನ್ನು ಕನ್ನಡ ಶಾಲು ಹಾಗೂ ಪುಸ್ತಕ ಸ್ಮರಣಿಕ್ಕೆ ನೀಡಿ ಸ್ವಾಗತಿಸಿದರು . ತಾಲೂಕು ಕಸಾಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು ಹಿತೇಶ್ ವಂದಿಸಿದರು. ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರಿ ಶರ್ಮ, ಶಾಂತ, ಪ್ರಗತಿ ಸಂಸ್ಥೆಯ ಮಾಧವಿ, ಮಧುಶ್ರೀ, ಶುಭಲಕ್ಷ್ಮಿ ಉಪಸ್ಥಿತರಿದ್ದರು.