ಪುತ್ತೂರು: ರಿಕ್ಷಾ ಚಾಲಕ-ಮಾಲಕರು ಸಹಿತ ವಿವಿಧ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ಮಾಡಬೇಕಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದು ನಿಮ್ಮೆಲ್ಲರ ವಿಶ್ವಾಸ ಪಡೆದು ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭರವಸೆ ನೀಡಿದರು.
ಅವರು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸಾರಥಿ ಸಂಗಮದಲ್ಲಿ ಮಾತನಾಡಿದರು.
ಕಾರ್ಮಿಕರ ಪ್ರೀತಿ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರೀತಿ ವಿಶ್ವಾಸದ ರಾಜಕಾರಣ ಮಾಡುತ್ತೇನೆ. ಅಸಂಘಟಿತ ಕಾರ್ಮಿಕರು ಎಲ್ಲರೂ ನನ್ನ ಮನೆಯವರು ಎಂಬ ಭಾವನೆಯಲ್ಲಿ ದಿನ 24 ಗಂಟೆಯೂ ಕೆಲಸ ಮಾಡುತ್ತೇನೆ ಎಂದ ಅವರು, ಮಾನು ಯಾವುದೇ ಪಕ್ಷದಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿಲ್ಲ, ನಾನು ನಿಂತಿರುವುದು ದೇವದುರ್ಲಬ ಕಾರ್ಯಕರ್ತರಿಂದ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚೈತನ್ಯ ತುಂಬುವ ನಿಟ್ಟಿನಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇ:ಳಿದರು.
ಶನಿಪೂಜೆ ಸಂದರ್ಭದಲ್ಲಿನ ಎನ್ ಕೌಂಟರ್ ವಿಚಾರದ ಕುರಿತು ಸರಿಯಾದ ಮಾಹಿತಿ ಇರಲಿಲ್ಲ. ಆದರೆ ಇದೀಗ ಮಾಜಿ
ಮುಖ್ಯಮಂತ್ರಿಗಳ ಬಾಯಲ್ಲೇ ಶ್ರೀ ಮಹಾಲಿಂಗೇಶ್ವರ ದೇವರು ಸತ್ಯಾಂಶವನ್ನು ಹೇಳಿಸಿದ್ದಾರೆ ಎಂದರು.
ಉದ್ಯಮಿ ರಾಜಶೇಖರ ಕೋಟ್ಯಾನ್ ಮಾತನಾಡಿ, ಅರುಣ್ ಕುಮಾರ್ ಪುತ್ತಿಲರು ಮುಂದೆ ಶಾಸಕರಾದರೆ ವಾಹನ ಚಾಲಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡುವ ಜವಾಬ್ದಾರಿ ನಮ್ಮದು ಎಂದರು.
ವೇದಿಕೆಯಲ್ಲಿ ರಾಜೀವ ಸುವರ್ಣ, ಬಿಜೆಪಿ ನಗರ ಯುವಮೋರ್ಚಾ ಮಾಜಿ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಂದ ಗಂಟೆಯೊಳಗೆ ಚುನಾವಣಾ ನಿಧಿಗೆ ಒಂದು ಲಕ್ಷಕ್ಕೂ ಮಿಕ್ಕಿ ನೆರವು ಹರಿದು ಬಂತು.