ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಬುಧವಾರ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ಆಯುಕ್ತಡಾ| ಗಿರಿಧರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಮೇಲೆಬಹಳ ದೊಡ್ಡ ಸಾಮಾಜಿಕ ಜವಾಬ್ದಾರಿ ಇದೆ. ಮುಂದೆ ಉದ್ಯೋಗ ದೊರಕಿದ ಮೇಲೆ ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳನ್ನೇ ಮಾಡಬೇಕು ಎಂದರು.
ಕಾಲೇಜಿನ ಸಂಚಾಲಕ ವಂ.ಜೆರೋಮ್ ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು.
ಬಿಸಿಎ ಪದವಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಫಾತಿಮತ್ ಸಾನಿದ, ಬಿಎಸ್ಸಿ ವಿಭಾಗದಲ್ಲಿ ಮೂರನೇ ರ್ಯಾಂಕ್ ಪಡೆದ ಧೀರಜ್ ಎಂ5ನೇ ರ್ಯಾಂಕ್ ಗಳಿಸಿದ ಶ್ರೀಶ ಎಂ ಎಸ್, ಬಿಬಿಎ ವಿಭಾಗದಲ್ಲಿ 5ನೇ ರ್ಯಾಂಕ್ ಪಡೆದ ಹರ್ಷಿತ ಕೆ, ಬಿಕಾಂ ವಿಭಾಗದಲ್ಲಿ 6ನೇ ರ್ಯಾಂಕ್ ಪಡೆದ ಶ್ರೀದೇವಿಕೆ, 7ನೇ ರ್ಯಾಂಕ್ ಪಡೆದ ಪ್ರತಿಮಾ ಎ ಮತ್ತು10ನೇ ರ್ಯಾಂಕ್ ಪಡೆದ ನಿಶಾಪ್ರಭಾ ಎನ್, ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ದೀಪ್ತಿ ವಿ., ಎಂಎಸ್ ಡಬ್ಲ್ಯೂ ವಿಭಾಗದಲ್ಲಿ 3ನೇ ರ್ಯಾಂಕ್ ಪಡೆದ ಅನ್ಶ, ಎಂಕಾಂ ನಲ್ಲಿ 3ನೇ ರ್ಯಾಂಕ್ ಗಳಿಸಿದ ಅಪೂರ್ವಪಿ ವಿ ಹಾಗೂ ವಿನೋಲಿ ಯಾಜಸ್ಲಿನ್ ಮಿನೇಜಸ್, 4ನೇ ರ್ಯಾಂಕ್ ಗಳಿಸಿದ ಶ್ಲಾಘ್ಯ ಆಳ್ವ ಕೆ, ಶ್ರಾವ್ಯ ಎನ್ ಕೆ ಮತ್ತು ಶ್ರೀಲಕ್ಷ್ಮಿಭಟ್ ಕೆ, 5ನೇ ರ್ಯಾಂಕ್ ಪಡೆದ ಬಾಸಿಲ, ಸಿಎಸ್ ಜಯಶ್ರೀ ಹಾಗೂ ಚೈತ್ರಾ ಬಿ,
ರ್ಯಾಂಕ್ 7ನೇ ರ್ಯಾಂಕ್ ಪಡೆದ ಹರಿಣಿ ಎಸ್ ಪೈ, 10ನೇ ರ್ಯಾಂಕ್ ಪಡೆದ ಹರ್ಷಿತ ಎಸ್, ಜೋತ್ಸ್ನಾ ಸಿಜೆ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಿನ್ಸಿಪಾಲ್ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋ ಮಾತನಾಡಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ| ಚಂದ್ರಶೇಖರ್ ಕೆ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಿನ್ಸಿಪಾಲ್ ಪ್ರೊ| ಗಣೇಶ್ ಭಟ್ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಭಾರತಿ ಎಸ್. ರೈ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಕಾರ್ಯಕ್ರಮನಿರೂಪಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹಮ್ಮದ್ ಆಶಿಕ್, ಅನುಶ್ರೀ ಮತ್ತು ಶಿವಾನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗಜೀವನ್ ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.