ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಎನ್ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ
ಪ್ರಮುಖ ಆರೋಪಿಗಳಾದ. ತುಫೈಲ್ ಎಂ.ಎಚ್. ಹಾಗೂ ಮೊಹಮ್ಮದ್ ಜಬೀರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದಂತಾಗಿದೆ.
ಪಿಎಫ್ಐಯ ಸಕ್ರೀಯ ಸದಸ್ಯನಾಗಿದ್ದ ತುಫೈಲ್ ಕೊಡಗು ಮೂಲದವನಾಗಿದ್ದು, ಮಾಸ್ಟರ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ. ಮಿತ್ತೂರಿನಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಪಿಎಫ್ ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ. ನೆಟ್ಟಾರು ಕೊಲೆ ಆರೋಪಿಗಳಿಗೆ ಕೊಡಗು, ಮೈಸೂರು, ತಮಿಳುನಾಡಿನಲ್ಲಿ ಆಶ್ರಯ ನೀಡಿದ್ದ.
ಮೊಹಮ್ಮದ್ ಜಬೀರ್ ದ.ಕ.ಜಿಲ್ಲಾ ಪಿಎಫ್ ಐ ಅಧ್ಯಕ್ಷನಾಗಿದ್ದು, ನೆಟ್ಟಾರ್ ಹತ್ಯೆಗೆ ಸಂಚು ರೂಪಿಸಲು ಗುಪ್ತ ಸಭೆಗಳಲ್ಲಿ ಭಾಗಿಯಾಗಿದ್ದ.