ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಇನ್ಸ್ಟಿಟ್ಯೂಷನ್ಸ್ ಇನೊವೇಶನ್ ಕೌನ್ಸಿಲ್ ಗಳ ಸಹಯೋಗದಲ್ಲಿ“ಹೌಟು ಪ್ಲಾನ್ ಫಾರ್ ಸ್ಟಾರ್ಟಪ್ – ಲೀಗಲ್ ಆಂಡ್ ಎಧಿಕಲ್ ಸ್ಟೆಪ್ಸ್? ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.
ಬೆಂಗಳೂರಿನ ಸ್ಲ್ಯಾಂಗ್ ಲ್ಯಾಬ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮಧುರಾನಾಥ್ ಆರ್. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಇಂದಿನ ಯುವ ಜನತೆ ಒಂದು ಉದ್ಯಮವನ್ನು ಸ್ಥಾಪಿಸಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಕನಸು ಕಾಣುತ್ತಿರುವುದು ಸಂತಸದ ವಿಚಾರ..ವಿದ್ಯಾರ್ಥಿಗಳಲ್ಲಿ ಸ್ಟಾರ್ಟಪ್ ನ ಕನಸನ್ನು ಬಿತ್ತುತ್ತಿರುವ ಸಂತ ಫಿಲೋಮಿನಾ ಕಾಲೇಜಿನ ಪ್ರಯತ್ನ ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ, “ಸ್ಟಾರ್ಟಪ್‌ಎಂಬುದು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕ ಶಕ್ತಿಯಾಗಿದೆ. ಯಾವುದೇ ಉದ್ಯಮ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಜನರ ಬದಲಾಗುತ್ತಿರುವ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು, ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ತಿಳಿದಿರಬೇಕು ಎಂದರು.
ಸಮೃದ್ಧಿ ಶೆಣೈ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಇನೊವೇಶನ್ ಸೆಲ್ ನ ಅಧ್ಯಕ್ಷ ಗೀತಾ ಪೂರ್ಣಿಮಾ ಸ್ವಾಗತಿಸಿ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ವಂದಿಸಿದರು. ಉಪನ್ಯಸಕಿ ರಾಜೇಶ್ವರಿ ಕಾರ್ಯಕ್ರಮ ನಿರೂಸಪಿಸಿದರು. ಕಾಲೇಜಿನ ಇನೊವೇಶನ್ ಸೆಲ್ ಸಂಯೋಜಕ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು.