ಕುಚ್ಚಲಕ್ಕಿ ಬೇಡಿಕೆ ಕಾಂಗ್ರೆಸ್ ನಿಂದ ಈಡೇರಲಿದೆ : ಅಶೋಕ್ ರೈ

ಪುತ್ತೂರು: ಪಡಿತರ ವಿತರಣೆಯಲ್ಲಿ ಇದುವರೆಗೆ ಬೆಳ್ತಿಗೆ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಜನ ಕುಚ್ಚಲಕ್ಕಿ ಅನ್ನ ಊಟ ಮಾಡುವ ಕಾರಣ ಈ ಭಾಗಕ್ಕೆ ರೇಶನ್ ಮೂಲಕ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆ ಇದ್ದು ಈ ಬೇಡಿಕೆಯನ್ನು ಈ ಬಾರಿ ಕಾಂಗ್ರೆಸ್ ಈಡೇರಿಸಲಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭರವಸೆ ನೀಡಿದ್ದಾರೆ.

ವಿಟ್ಲ ಕಂಬಳಬೆಟ್ಟುವಿನಲ್ಲಿ ರಾತ್ರಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಗೆ ಕುಚ್ಚಲಕ್ಕಿ ನೀಡುವುದಾಗಿ ಕಳೆದ ಒಂದು ವರ್ಷದಿಂದ ಬಿಜೆಪಿ ಸರಕಾರ ಹೇಳುತ್ತಿದೆ. ಈ ಭಾಗದ ಸಚಿವರು ಕಳೆದ ಜನವರಿ ತಿಂಗಳಲ್ಲಿ ಕುಚ್ಚಲಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ ಬಿಜೆಪಿ ಸರಕಾರ ಮತ್ತು ಸಚಿವರುಗಳ ಭರವಸೆ ಭರವಸೆಯಾಗಿಯೇ ಉಳಿದಿದೆ. ಈ‌ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಕುಚ್ಚಲಕ್ಕಿ‌ಭಾಗ್ಯ ದೊರೆಯಲಿದೆ ಎಂದು ಹೇಳಿದರು. ಹತ್ತು ಕೇಜಿ ಅಕ್ಕಿ ಪೈಕಿ 5 ಕೆ ಜಿ ಬೆಳ್ತಿಗೆ ಮತ್ತು 5 ಕೆ ಜಿ ಕುಚ್ಚಲಕ್ಕಿ ನೀಡುತ್ತೇವೆ. ಬಡವರ ಏಳಿಗೆಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top