ಪುತ್ತೂರು: ಪುತ್ತೂರು ಬೈಪಾಸ್ ತೆಂಕಿಲ ರಸ್ತೆಯಲ್ಲಿ ಸೋಮವಾರ ಸಂಜೆ ಸರಣಿ ಅಪಘಾತ ಸಂಭವಿಸಿ ನಾಲ್ಕು ಕಾರುಗಳಿಗೆ ಹಾನಿಯಾಗಿವೆ.

ಅಪಘಾತದ ರಭಸಕ್ಕೆ ಕಾರಿನ ಎರಡು ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.
ಆದರೆ ಕಾರುಗಳ ಹಲವು ಭಾಗ ಜಖಂಗೊಂಡಿದೆ.