ಕಾಂಗ್ರೆಸ್ ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸಿದೆ | ಬಿಜೆಪಿ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ

ಪುತ್ತೂರು: ಹಿಂದಿನ ಕಾಂಗ್ರೆಸ್ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯ ಕುರಿತು ಇಂದು ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರು ಆಲೋಚನೆ ಮಾಡಬೇಕಾಗಿದ್ದು, ಘಟನೆಗೆ ಉತ್ತರ ನೀಡಲು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಅವರು ಸೋಮವಾರ ತೆಂಕಿಲ ಬೈಪಾಸ್ ಬಳಿಯ ದರ್ಶನ್ ಹಾಲ್ ನಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಳೆದ 9 ದಶಕಗಳಿಂದ ಕಾಂಗ್ರೆಸ್ ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸಿದೆ. ಕಾಂಗ್ರೆಸ್ ಪುಕ್ಕಟೆ ಕೊಡುವುದನ್ನು ಮಾತ್ರ ಕಲಿಸಿದೆ. 5-10 ಕೆ.ಜಿ. ಅಕ್ಕಿ ಕೊಡುತ್ತೀರಿ. ಮತ್ತೆ ನಾವು ಏನು ಮಾಡಬೇಕು ? ಎಂದು ಪ್ರಶ್ನಿಸಿದ ಶಾಂತಾರಾಮ ಸಿದ್ದಿ, ನಮಗೆ ಶಿಕ್ಷಣ, ಉದ್ಯೋಗ, ಸಮಾಜದಲ್ಲಿ ಗೌರವ ಸ್ವಾಭಿಮಾನದ ಬದುಕು ಬೇಕು. ಇದನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೀಡುತ್ತಿದೆ ಎಂದರು.
ಅನೇಕ ಸಮುದಾಯಗಳು ದಲಿತ ಸಮುದಾಯಕ್ಕೆ ಸೇರುತ್ತವೆ. ನಮಗೆ ಕುರ್ಚಿ ಮೇಲೆ ಕುಳಿತುಕೊಳ್ಳುವ ಶಕ್ತಿ ತಂದದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಆಂಬೇಡ್ಕರ್. ಅನಂತರದಲ್ಲಿ ಬಿಜೆಪಿ ಸರಕಾರ ಈ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ಸ್ವಾಭಿಮಾನದ ಬದುಕಿಗಾಗಿ ಪೂರಕವಾದ ಯೋಜನೆಗಳನ್ನು ತಂದು ದಲಿತ ಸಮುದಾಯಗಳು ಪ್ರಗತಿ ಸಾಧಿಸಲು ಹಾದಿ ಮಾಡಿಕೊಟ್ಟಿದೆ ಎಂದು ಹೇಳಿದರು.  































 
 

ಬಿಜೆಪಿ ಸರಕಾರ ಬುಡಕಟ್ಟು ಜನಾಂಗದ ಮಹಿಳೆ ದ್ರೌಪರಿ ಮುರ್ಮು ಅವರಿಗೆ ರಾಷ್ಟ್ರಪತಿ ಸ್ಥಾನಮಾನ, ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.. ಅಲ್ಲದೆ ನನ್ನನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿರುವುದೂ ಬಿಜೆಪಿ. ಈ ನಿಟ್ಟಿನಲ್ಲಿ ನಮ್ಮ ಸಮುದಾಯ ಸದಾ ಬಿಜೆಪಿ ಪಕ್ಷದೊಂದಿಗೇ ಇರಬೇಕಾದ ಅಗತ್ಯವಿದೆ ಎಂದ ಅವರು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಆಡಳಿತ ಚುಕ್ಕಾಣಿ ಹಿಡಿಯವುದು ಗ್ಯಾರಂಟಿ. ಈ ನಿಟ್ಟಿನಲ್ಲಿ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಭವ್ಯ ಭಾರತದ ಇತಿಹಾಸ, ಪರಂಪರೆಯಲ್ಲಿ ಪರಿಶಿಷ್ಟ ಜಾತಿ‌ಪಂಗಡದ ಕೊಡುಗೆ ಅಪಾರವಾಗಿದ್ದು, ಅವರಿಗೆ ಸ್ವಾವಲಂಬಿ‌, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಸಂವಿಂಧಾನ ನಿರ್ಮಾತೃ ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ‌ಪಂಗಡದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ನಿಟ್ಟಿನಲ್ಲಿ  ಸಂವಿಂಧಾನದಲ್ಲಿ ಮೀಸಲಾತಿಯನ್ನು ಅಂಬೇಡ್ಕರ್  ಮಾಡಿದ್ದಾರೆ‌. ಅಂತಹ ಅಂಬೇಡ್ಕ್ ಅವರಿಗೆ ಕಾಂಗ್ರೆಸ್ ಸರಕಾರ ಭಾರತರತ್ನ ನೀಡದೇ ಇಂದಿರಾಗಾಂಧಿಗೆ ನೀಡುವ ಮೂಲಕ ಅಂ ಬೇಡ್ಕರ್ ಅವರಿಗೆ ಅವಮಾನ ಮಾಡಿದೆ. ಅದರೆ ಬಿಜೆಪಿ ಸರಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಅವರನ್ನು ಗೌರವಿಸಿದೆ ಎಂದು ಹೇಳಿದ ಅವರು‌,  ಪರಿಶಿಷ್ಟ ಜಾತಿ, ಪಂಗಡಕ್ಕೆ ಪ್ರತ್ಯೇಕ ಸಚಿವಾಲಯವನ್ನು ಬೊಮ್ಮಾಯಿ ಸರಕಾರ ನೀಡಿದೆ.  ಪುತ್ತೂರಿನಲ್ಲಿ ಪ್ರತಿ ಗ್ರಾಮಕ್ಕೆ ಅಂಬೇಡ್ಕರ್ ಭವನ ನೀಡುವ ಕೆಲಸ ಅಗಿದೆ. ಈ  ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಮನಸ್ಸು ಮಾಡಿದರೆ ಬಿಜೆಪಿ ಸರಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ತರಲು ಸಾಧ್ಯ ಎಂದರು.

ಚಿಕ್ಜಮಗಳೂರು ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ  ಸೀತರಾಮ ಭರಣ್ಯ ಮಾತನಾಡಿ, ಈ ಹಿಂದೆ ಕರ್ನಾಟಕವನ್ನು ಆಳಿದವರಿಂದ ಹಿಡಿದು ಮನಮೊಜನ್ ಸಿಂಗ್ ತನಕ ಎಸ್‍ಸಿ ಸಮುದಾಯವನ್ನು ಕತ್ತಲೆಯಲ್ಲಿ ಇಡುನ ಕೆಲಸ ಮಾಡಿದೆ. ಇದರಿಂದ ಬೇಸತ್ತ ಸಮುದಾಯ‌ಬಿಜೆಪಿ ಜತೆ ಕೈಜೋಡಿಸುಮ ಮೂಲಕ ಕಮಲ ಅರಳುವಂತೆ ಮಾಡಿದೆ. ಈ ಮೂಲಕ ಸಮುದಾಯವನ್ನು‌ಮೇಲೆತ್ತುವ ಮೂಲಕ ಬಿಜೆಪಿ ಸರಕಾರ ನುಡಿದಂತೆ ನಡೆದಿದೆ. ಈ ನಿಟ್ಟಿನಲ್ಲಿ ಕೆಟ್ಟ ಕಾಂಗ್ರೆಸ್ ಕುರಿತು ‌ಆಲೋಚನೆ ಮಾಡಬೇಕಾಗಿದೆ ಎಂದ ಅವರು, ನಾವೆಲ್ಲರು ಪರಿಶಿಷ್ಟರು ಎಂಬ ಭಾವನೆಯಿಂದ ಒಟ್ಟಾಗಿ ನಮ್ಮ ಶಕ್ತಿಯನ್ನು ತೋರಿಸುವ ಮೂಲಕ ಬಿಜೆಪಿ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ ಎಂದರು.

ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಮಾಡಿದ ಅಭಿವೃದ್ಧಿ ಕೆಲಸಗಳಾದ ಗ್ರಾಮ ಗ್ರಾಮಗಳಲ್ಲಿ ರಸ್ತೆ ಕಾಂಕ್ರಿಟೀಕರಣ, ಅಂಬೇಡ್ಕರ್ ಭವನ ನಿರ್ಮಾಣ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊಡುಗೆ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳು  ಬಿಜೆಪಿಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದ ಅವರು, ಕೇಂದ್ರ ಸರಕಾರ ಎಸ್ ಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜ್ಯಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಈ ಬಾರಿ ಎಸ್‍ಸಿ ಸಮುದಾಯ ನಮ್ಮೊಂದಿಗೆ ಕೈಜೋಡಿಬೇಕೆಂದು ವಿನಂತಿಸಿದರು.

ಉಡುಪಿ ಶಾಸಕ ರಘುಪತಿ ಭಟ್ ದೀಪ ಬೆಳಗಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್‍ಸಿ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀಕಾಂತ್, ಬಾಬು ಬೊಮ್ಮರಗುಂಡಿ, ಮಂಗಳಾ ಆಚಾರ್ಯ, ವಿನಯ ನೇತ್ರ, ಸುಲೋಚನಾ ಭಟ್, ಬಿಂದು ಸುರೇಶ್ ಉಪಸ್ಥಿತರಿದ್ದರು.

ಅಣ್ಣಪ್ಪ ಕಾರೆಕ್ಕಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯೆ ಗೌರಿ ಬನ್ನೂರು ಪ್ರಾರ್ಥನೆ ಹಾಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top