ಪುತ್ತೂರು: ವಿಧಾನ ಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಸಾಜ ವಾರ್ಡ್ ನ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದ ವಠಾರ 105 ರಲ್ಲಿ ಮಹಾ ಸಂಪರ್ಕ ಅಭಿಯಾನ ಮತ್ತು ಪ್ರಣಾಳಿಕೆ ನೀಡುವ ಕಾರ್ಯಕ್ರಮ ಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಬಳಿಕ ಮನೆ ಮನೆ ಭೇಟಿ ನೀಡಿ ಸಂಪರ್ಕ ಅಭಿಯಾನ ಮಾಡಲಾಯಿತು
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಬಿಜೆಪಿ ಬಲ್ನಾಡು ಶಕ್ತಿ ಕೇಂದ್ರದ ಪ್ರಮುಖ್ ಅಕ್ಷಯ್ ಶೆಟ್ಟಿ ಸಲ್ಪಾಜೆ, ಗ್ರಾಮ ಪಂಚಾಯಿತಿ ಸದಸ್ಯ ರವಿಚಂದ್ರ ಸಾಜ, ವಸಂತಿ ಹರೀಶ್ ಪೂಜಾರಿ, ಶೋಭಾ ಮುರುಂಗಿ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.