ಪುತ್ತೂರು: ಮೇ 1ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಶನ್ ಹಾಲಿನಲ್ಲಿ ಎಸ್.ಸಿ. ಸಮಾವೇಶ ನಡೆಯಲಿದೆ ಎಂದು ಎಸ್.ಸಿ. ಮೋರ್ಚಾ ಜಿಲ್ಲಾ ಸದಸ್ಯ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ನೋಡಿಕೊಂಡು ಜನರು ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೂ ಜನರು ಒಳಗಾಗಬಾರದು ಎಂದ ಅವರು, ಬಿಜೆಪಿ ನೀಡಿರುವ ಯೋಜನೆಗಳು ಹಾಗೂ ಕೆಲಸಗಳ ವಿವರ ನೀಡಿದರು.
1. ಬಿಜೆಪಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪಾಯಿ ಹಳ್ಳಿ ಹಳ್ಳಿಯಲ್ಲು ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದಾರೆ ಹಾಗೂ ಹಲವಾರು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ
2. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿಯಂತಹ ಯೋಜನೆ ಮತ್ತು ಹಲವಾರು ಜನಪರ ಯೋಜನೆಗಳನ್ನು ಕೊಟ್ಟು ಎಲ್ಲರ ಮನಸ್ಸಿನಲ್ಲಿ ಕರ್ನಾಟಕದ ಪ್ರತಿಯೊಬ್ಬರ ಪ್ರೀತಿಗೆ ಕಾರಣರಾಗಿದ್ದಾರೆ.
3. ಪ್ರಧಾನಮಂತ್ರಿಗಳು ಜನಪರ ಕಾಳಜಿಯನ್ನು ವಹಿಸಿ ಸುಕನ್ಯ ಸಮೃದ್ಧಿ ಯೋಜನೆಯನ್ನು ಭಾರತಾದ್ಯಂತ ಜಾರಿಗೆ ತಂದಿರುತ್ತಾರೆ ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಎಲ್ಲಾ ಸಮುದಾಯಕ್ಕೂ ಮನೆ, ನೀರು, ಬೆಳಕು, ಶೌಚಾಲಯ ಇಂಥ ಹಲವಾರು ಯೋಜನೆಗಳನ್ನು ಭಾರತಾದ್ಯಂತ ಜಾರಿಗೆ ತಂದಿರುತ್ತಾರೆ
4. ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಗ್ರಹ ನಿರ್ಮಾಣದ ಮೊತ್ತವನ್ನು ರೂ. 2,10,000 ಲಕ್ಷಕ್ಕೆ ಏರಿಸಲಾಗಿದೆ.
5. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ವಸತಿ ಯೋಜನೆ
6. ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ 75 ಯೂನಿಟ್ ವಿದ್ಯುತ್ ಉಚಿತ ಯೋಜನೆ.
7. ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ PMEGP loan ನಲ್ಲಿ ಪರಿಶಿಷ್ಟ ಜಾತಿ ಮಹಿಳೆಯರಿಗೆ 30% ಸಬ್ಸಿಡಿ
8. ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯದ ಶಾಲೆಗಳಿಗೆ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ನಾಮಕರಣ
9. ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಬಿಜೆಪಿ ಸರ್ಕಾರ
10.ರಾಜ್ಯದಲ್ಲಿ ಒಟ್ಟು 68 ಡಾ.ಬಿಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ.
11.ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿ 15% ನಿಂದ 17% ವರೆಗೆ ಹೆಚ್ಚಿಸಲಾಗಿದೆ.
12. ಶಾಸಕರು ಸಂಜೀವ ಮಟಂದೂರು 1500 ಕೋಟಿ ಅನುದಾನ ಮತ್ತು ಪ್ರತಿವರ್ಷ ಡಾ.ಬಿ.ಆರ್ ಅಂಬೇಡ್ಕರ್ ನಿಗಮದಿಂದ 25 ಕೊಳವೆ ಬಾವಿ ಮತ್ತು ಮಹಿಳೆಯರಿಗೆ ನಿಗಮದಿಂದ ಸಬ್ಸಿಡಿ ನೀಡಲಾಗಿದೆ. ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೊರಗಪ್ಪ ಈಶ್ವರಮಂಗಲ, ಲೋಹಿತ್ ಅಮ್ಚಿನಡ್ಕ ಉಪಸ್ಥಿತರಿದ್ದರು.