ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಮಹಿಳಾ ಸಮಾವೇಶ ‘ಸೀತಾ ಪರಿವಾರ’ ಕಾರ್ಯಕ್ರಮ ಶುಕ್ರವಾರ ಸಂಜೆ ಸುಭದ್ರ ಸಭಾಮಂದಿರದಲ್ಲಿ ಜರಗಿತು.
ದಿಕ್ಸೂಚಿ ಭಾಷಣ ಮಾಡಿದ ಅಕ್ಷಯ ಗೋಖಲೆ, ಪುತ್ತೂರಿನ ಮಹಿಳೆಯರು ಮನಸು ಮಾಡಿದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಜಯಶಾಲಿಯಾಗುವರು. ಪುತ್ತೂರನ್ನು ಬದಲಾಯಿಸಲು ಬೇಕಾದ ಸಮಯ ಬಂದಿದೆ. ಈಗ ಬೇಕಾಗಿರುವುದು ಮನಸ್ಸು ಮತ್ತು ಹೃದಯ ಎಂದರು.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಧಿಕಾರಕ್ಕಾಗಿ ಚುನಾವಣೆಗೆ ನಿಂತದಲ್ಲ. ಸಮಾಜದ ಅಸ್ಮಿತೆಯ ಪ್ರತೀಕವಾದ ಹಿಂದುತ್ವದ ಆಧಾರದಲ್ಲಿ ರಾಜಕಾರಣ ಆಗಬೇಕು. ಸರ್ವಾಧಿಕಾರ ಬುಡಮೇಲು ಮಾಡಿ, ಭಗವಧ್ವಜದ ಅಡಿಯಲ್ಲಿ ಕೆಲಸ ಕಾರ್ಯ ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಲ್ಲಿಕಾ ಪ್ರಸಾದ್ ಗೌಡ ಮಹಿಳಾ ಸಮಾವೇಶವನ್ನು ಉದ್ಘಾಟಿಸಿದರು.
ಡಾ.ಜೆ.ಸಿ ಅಡಿಗ, ಭಾಸ್ಕರ್ ಆಚಾರ್ ಹಿಂದಾರು, ಪುಷ್ಪಾ ಮುಂಡೂರು ಉಪಸ್ಥಿತರಿದ್ದರು.
ಸಮೃದ್ಧಿ ಶೆಣೈ ಪ್ರಾರ್ಥಿಸಿದರು. ಕಾರ್ಯಕ್ರಮದ ಪ್ರಮುಖ್ ವಸಂತಲಕ್ಷ್ಮೀ ಸ್ವಾಗತಿಸಿದರು. ಜಯಮಾಲ ಕಾರ್ಯಕ್ರಮ ನಿರೂಪಿಸಿದರು.
ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.