ಕೊಂಬಾರಿನಲ್ಲಿ ಕಾಡಾನೆ ಮೃತದೇಹ ಪತ್ತೆ

ಪುತ್ತೂರು : ಅಸ್ವಸ್ಥಗೊಂಡ ಕಾಡಾನೆಯ ಮೃತದೇಹವೊಂದು ಕೊಂಬಾರು ಗ್ರಾಮದ ಬಗ್ಪುಣಿ ಎಂಬಲ್ಲಿ ಏ.28 ರಂದು ಪತ್ತೆಯಾಗಿದೆ.

ಕೆಲ ದಿನಗಳಿಂದ ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯ ಚೇರು, ಎರ್ಮಾಯಿಲ್ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಗಂಡು ಕಾಡಾನೆ ಗುರುವಾರ ಕೊಂಬಾರು ಗ್ರಾಮದ ಕೆಂಜಾಳ ಬಗ್ಪುಣಿ ಎಂಬಲ್ಲಿ ಹೊಳೆಯಲ್ಲಿ ಕಾಣಿಸಿಕೊಂಡಿತ್ತು. ಸಂಜೆ ವೇಳೆ ನೀರಿನಿಂದ ಮೇಲೆ ಬಂದು ಅರಣ್ಯದೊಳಗೆ ಸಂಚರಿಸಿತ್ತು.

ಈ ಸಂದರ್ಭ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ನಡೆದಾಡಲು ಸಾಧ್ಯವಾಗದ ಆನೆ ಸ್ವಲ್ಪ ದೂರ ಚಲಿಸಿ ನಿತ್ರಾಣಗೊಂಡು ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top