ಪುತ್ತೂರು: ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನುರಕ್ಷಿಸುತ್ತದೆ. ಧರ್ಮವೆನ್ನುವುದು ಸತ್ಯ, ಸತ್ಯಕ್ಕೆ ಹೇಗೆ ಸಾವಿಲ್ಲವೋ ಹಾಗೆಯೇ ಧರ್ಮಕ್ಕೆ ಸಾವಿಲ್ಲ. ಧರ್ಮಕ್ಕೆ ಅವಿನಾಶಿ ಗುಣವಿದೆ. ಪೂರ್ವಜರಿಂದ ಬಂದಂತಹ ಆಚಾರ ವಿಚಾರಗಳನ್ನು ಒಪ್ಪಿಕೊಳ್ಳಬೇಕಾದರೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಬೇಕು. ಹಿಂದೂ ಧರ್ಮವು ಸಮರವನ್ನು ಸಾರುವ ಧರ್ಮವಲ್ಲಅದು ಶಾಂತಿಯನ್ನು ಸಾರುವ ಧರ್ಮ. ಹಿಂದೂ ಧರ್ಮ. ಶಾಂತಿ, ಸಹನೆ, ತ್ಯಾಗ ಇರುವುದೇ ಹಿಂದೂ ಧರ್ಮದಲ್ಲಿ. ಸಂಸ್ಕೃತಿಯ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮ ಸೃಷಿಗೊಂಡಿದೆ ಎಂದು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯುತ್ತ) ಪುತ್ತೂರು ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಧರ್ಮೋ ರಕ್ಷತಿರಕ್ಷಿತಃ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ದೇಶಕ್ಕಾಗಿ ದುಡಿಯಬೇಕು ಭೂಮಿಯನ್ನು ತಾಯಿಯಂತೆ ನೋಡಬೇಕು. ಪುಸ್ತಕಗಳನ್ನು ಓದಬೇಕು ಅಥವಾ ಹೇಳಿದ್ದನ್ನು ತಿಳಿದುಕೊಳ್ಳಬೇಕು. ಹಾಗಾದಾಗ ಮಾತ್ರಧರ್ಮ ಉಳಿಯಲು ಸಾಧ್ಯ ಎಂದರು.
ವಿವೇಕಾನಂದಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ದೇಶಭಕ್ತಿ, ಸನಾತನ ಧರ್ಮದ ಬಗ್ಗೆ ಕಾಳಜಿ ಇರಬೇಕು. ಧರ್ಮ ಎನ್ನುವ ವಿಷಯಕ್ಕೆ ಪಠ್ಯಕ್ರಮ ಹಾಗೂ ಶಿಕ್ಷಕರೆಂಬುವವರು ಇಲ್ಲ. ಇದಕ್ಕೆಲ್ಲ ನಮ್ಮ ಆಸಕ್ತಿಯೇ ಮುಖ್ಯ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಎಂ. ಶ್ರೀನಿವಾಸ ಸಾಮಂತ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಡಾ.ರವಿಕಲಾ ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತಾ ಎಂ ಸ್ವಾಗತಿಸಿ, ರಕ್ಷಿತಾ ಎಸ್. ವಂದಿಸಿ. ಚೈತನ್ಯ ಲಕ್ಷ್ಮೀ ನಿರೂಪಿಸಿದರು.