ಪುತ್ತೂರು: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆ ಸುರಿದಿದೆ. ಈ ಮೂಲಕ ತಂಪಿನ ಸಿಂಚನ ಉಂಟಾಗಿದೆ.
ಕಾಣಿಯೂರು, ಬೆಳಂದೂರು ಮುಂತಾದ ಕಡೆಗಳಲ್ಲಿ ಮಳೆ ಸುರಿಯುತ್ತಿದ್ದು, ಪುತ್ತೂರಿನಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಉಂಟಾಗಿತ್ತು.
ಪುತ್ತೂರಿನಲ್ಲೂ ಸಂಜೆ ವೇಳೆ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ ಅನುರಣನ ಕೇಳಿ ಬರುತ್ತಿದ್ದು ಆದರೂ ಮಳೆ ಬರಲೇ ಇಲ್ಲ.
