ಪುತ್ತಿಲ ಪ್ರಣಾಳಿಕೆಯಲ್ಲಿ ಏನೇನಿದೆ? | ಎಂಡೋ ಸಲ್ಫಾನ್ ಪರಿಹಾರ, ಜಿಲ್ಲಾಕೇಂದ್ರ, 24×7 ಹೆಲ್ಪ್ ಲೈನ್ ಇತ್ಯಾದಿ ಪ್ರಣಾಳಿಕೆಯಲ್ಲಿವೆ

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರು 31 ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ದರ್ಬೆ ಸುಭದ್ರ ಕಲಾಣ ಮಂಟಪದ ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸತೀಶ್ ರೈ ನೀರ್ಪಾಡಿ, ಪ್ರಮೋದ್ ರೈ, ಮನ್ಮಥ ಶೆಟ್ಟಿ ಅವರು ಪ್ರಣಾಳಿಕೆ ತಯಾರಿಸುವ ನೇತೃತ್ವ ವಹಿಸಿದ್ದರು.

ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಸುನಿಲ್ ಬೋರ್ಕರ್, ಭಾಸ್ಕರ್ ಆಚಾರ್ಯ ಹಿಂದಾರು, ಸೇಡಿಯಾಪು ಜನಾರ್ದನ ಭಟ್, ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಸನ್ನ ಕುಮಾರ್ ಮಾರ್ತಾ, ಸ್ನೇಹ ಸಿಲ್ಕ್ ನ ಸತೀಶ್ ಕುಮಾರ್, ನಿವೃತ್ತ ತಹಸೀಲ್ದಾರ್ ಮೋನಪ್ಪ ಪುರುಷ, ನಿವೃತ್ತ ಸೇನಾನಿ ಚಂದಪ್ಪ ಮೂಲ್ಯ, ಕುಶಾಲಪ್ಪ ಗೌಡ ಬಳಕ್ಕ, ರಾಜಶೇಖರ್ ಉದ್ಯಮಿ ಬನ್ನೂರು, ನಗರ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಪ್ರವೀಣ್ ಭಂಡಾರಿ, ಮರದಮುತ್ತು ಕೌಡಿಚ್ಚಾರ್, ಪಡ್ನೂರು ಶ್ರೀರಾಮ ಯುವಕ ಮಂಡಲದ ಲೋಕೇಶ್, ಅರುಣ್ ಇಂಡಸ್ಟ್ರೀಸ್ ಅರುಣ್ ಕುಮಾರ್ ರೈ ಡಿಂಬ್ರಿ ಮೊದಲಾದವರು ಉಪಸ್ಥಿತರಿದ್ದರು.































 
 

ಹೀಗಿದೆ ನೋಡಿ ಪ್ರಣಾಳಿಕೆ!

ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ/ ಲಂಚ ರಹಿತ ಜನಸ್ನೇಹಿ ಆಡಳಿತ ವ್ಯವಸ್ಥೆ ಜನ ವಿರೋಧಿ ಕಾನೂನುಗಳ ರದ್ದತಿಗೆ ಕ್ರಮ

ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿಸಲು ಹಾಗೂ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳ ಸ್ಥಳಾಂತರಕ್ಕೆ ಕ್ರಮ

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಕ್ರಮ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ

ವಿಟ್ಲವನ್ನು ತಾಲೂಕು ಕೇಂದ್ರ ಮಾಡುವ ಸಂಕಲ್ಪ – ಶಾಸಕರ ಕಛೇರಿ ಪ್ರಾರಂಭ ಹಾಗೂ ವಾರದಲ್ಲಿ ಎರಡು ದಿನ ಈ ಕಛೇರಿಯಿಂದ ಕಾರ್ಯ ನಿರ್ವಹಣೆ.

400KV ಉಡುಪಿ – ಕಾಸರಗೋಡು ವಿದ್ಯುತ್ ಮಾರ್ಗವು ರೈತರ ಜಮೀನಿನಲ್ಲಿ ಹಾದು ಹೋಗದಂತೆ ಕ್ರಮ.

ಅಡಿಕೆ, ತೆಂಗು, ರಬ್ಬರ್, ಕೋಕೋ ಮುಂತಾದ ಬೆಳೆಗಳ ಮೌಲ್ಯವರ್ಧನೆ, ರೋಗ ನಿರ್ವಹಣೆ, ಸಂಶೋಧನೆಗೆ ಕ್ರಮ

ವ್ಯವಸ್ಥಿತವಾಗಿ ಕ್ಷೇತ್ರದಾದ್ಯಂತ ಅಣೆಕಟ್ಟುಗಳ ನಿರ್ಮಾಣ, ನಿರ್ವಹಣೆಗೆ ಕ್ರಮ

11E ನಕ್ಷೆ ಶುಲ್ಕ ಕಡಿತ, ಅಕ್ರಮ ಸಕ್ರಮ ಪ್ಲಾಟಿಂಗ್ ಸಮಸ್ಯೆಗೆ ಪರಿಹಾರ, ಅಕ್ರಮ ಸಕ್ರಮ, ಕುಮ್ಕಿ ಹಕ್ಕು 94c, 94CC ಮಂಜೂರಾತಿಗೆ ಕ್ರಮ, ಭೂ ಪರಿವರ್ತನೆ ನಿಯಮ ಸರಳೀಕರಣ ಮತ್ತು ಶೀಘ್ರ ಅನುಮತಿಗೆ ವ್ಯವಸ್ಥೆ

ನಗರ ಪ್ರದೇಶದಲ್ಲಿ ಕಟ್ ಕನ್ವರ್ಷನ್ ಸಮಸ್ಯೆ ಪರಿಹಾರ, ನಿವೇಶನ ರಹಿತರಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಆದ್ಯತೆ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ

ಪ್ರಾಕೃತಿಕ ಸಮತೋಲನಕ್ಕೆ ಪರಿಸರ ಸ್ನೇಹಿ ಸಸ್ಯಗಳ ನಾಟಿ ಬಗ್ಗೆ ಕ್ರಮ

ನಗರ ಪ್ರದೇಶಕ್ಕೆ ಸೂಕ್ತ ಒಳಚರಂಡಿ ವ್ಯವಸ್ಥೆ

ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕ್ರಮ

ತುಳುನಾಡಿನ ಕ್ರೀಡೆ, ಕಲೆ, ಸಂಸ್ಕೃತಿ ಪ್ರೋತ್ಸಾಹಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನ

ಉಚಿತ ಶಿಕ್ಷಣ ಒದಗಿಸುವ ಸರಕಾರಿ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಕ್ರಮ

ಕ್ಷೇತ್ರದ ವ್ಯಾಪ್ತಿಯಲ್ಲಿ ಐಟಿ ಹಬ್ ಸ್ಥಾಪಿಸಿ, ತಾಲೂಕು ಕೇಂದ್ರದಲ್ಲಿ ಉದ್ಯೋಗ ಮೇಳ ಯೋಜನೆಗೆ ಕ್ರಮ

ಹೋಬಳಿಗೊಂದು ಕೈಗಾರಿಕಾ ವಲಯ ರಚಿಸಿ, ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ.

ದೇಶೀಯ ಗೋ ತಳಿಗಳ ಸಂರಕ್ಷಣೆ, ಗೋಶಾಲೆಗಳ ಸ್ಥಾಪನೆ, ಪಶುಪಾಲನೆಗೆ ಪ್ರೋತ್ಸಾಹ.

ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆ, ಕಲ್ಯಾಣಕ್ಕೆ ಸೂಕ್ತ ಯೋಜನೆ.

ರಿಕ್ಷಾ/ಟ್ಯಾಕ್ಸಿ ವಾಹನಗಳ ಚಾಲಕ ಮಾಲಕರ ಸಮಸ್ಯೆಗಳಿಗೆ ಪರಿಹಾರ.

ಪುತ್ತೂರು ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ.

ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣ.

ವಿಟ್ಲ ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ಠಾಣೆ ರಚನೆಗೆ ಕ್ರಮ.

ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಕ್ರೀಡಾಳುಗಳ ತರಬೇತಿಗೆ ಸಮರ್ಪಕ ವ್ಯವಸ್ಥೆ.

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಡಿಸ್ಥಳ ಮಂಜೂರಾತಿ, ಅಭಿವೃದ್ಧಿಗೆ ಸೂಕ್ತ ಕ್ರಮ.

ದಿ. ಸೌಮ್ಯಭಟ್ ಸ್ಮರಣಾರ್ಥವಾಗಿ ಯುವತಿಯರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ.

ದಿ. ಕಾರ್ತಿಕ್ ಮೇರ್ಲ ಸ್ಮರಣಾರ್ಥವಾಗಿ ಸರಕಾರಿ ಐಟಿಐ ಸ್ಥಾಪನೆ.

ದಿ. ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ಯುವಕರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ ಮತ್ತು ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಗೆ ವ್ಯವಸ್ಥೆ.

ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ, ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರು, ಗ್ರಾಮ ಸಹಾಯಕರ ಖಾಯಾಮತಿ ಬಗ್ಗೆ ಕ್ರಮ. ಯುವಕರ, ಯುವತಿಯರ, ಮಹಿಳೆಯರ, ಶ್ರಮಜೀವಿಗಳ, ರೈತರ, ಹಿರಿಯರ, ಎಲ್ಲಾ ಸಮಸ್ಯೆಗಳಿಗೆ ಸಹಾಯವಾಣಿ (Help Line) ಮೂಲಕ ದಿನದ 24 ಗಂಟೆಯೂ ಸ್ಪಂದನೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top