ಪುತ್ತೂರು: ಆಮ್ ಆದ್ಮಿ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಬಿ.ಕೆ. ವಿಶು ಕುಮಾರ್ ಅವರು ಕಬಕ ವಿದ್ಯಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪ್ರಚಾರ ಕಾರ್ಯದ ನಡುವೆ ಹಲವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ವಿದ್ಯಾಪುರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ, ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವ ಬಗ್ಗೆ ಭರವಸೆ ನೀಡಲಾಯಿತು ಎಂದು ಡಾ. ಬಿ.ಕೆ. ವಿಶು ಕುಮಾರ್ ತಿಳಿಸಿದ್ದಾರೆ.
























