ಬೆದರಿಕೆಯೊಡ್ಡಿದವನನ್ನು ಗುರುತಿಸಿದ ಪೊಲೀಸರು
ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. 112 ಟೋಲ್ಫ್ರೀ ನಂಬರ್ನಿಂದ ಕರೆ ಮಾಡಿ ಬೆದರಿಕೆವೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ ರಂಗಕ್ಕಿಳಿದಿದ್ದು, ಕರೆ ಮಾಡಿದ ವ್ಯಕ್ತಿಯನ್ನು ರಿಹಾನ್ ಎಂದು ಗುರುತಿಸಿದೆ. ಅವನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈತ ಕರೆ ಮಾಡಿದ್ದಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಕೂಡ ಹಾಕಿದ್ದ. ಆತನ ಡಿಪಿಯಲ್ಲಿ ಅಲ್ಲಾವು ಎಂದು ಬರೆದಿರುವ ಫೊಟೊ ಇದೆ. ಮುಖ್ಯಮಂತ್ರಿ ಯೋಗಿಯನ್ನು ಶೀಘ್ರ ಸಾಯಿಸುತ್ತೇನೆ ಎಂದು ಆತ ಸಂದೇಶ ಬರೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 112 ಉತ್ತರ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ಕರೆ ಮಾಡುವ ಸಹಾಯವಾಣಿಯ ನಂಬರ್.