ಪುತ್ತೂರು: ಕಾಣಿಯೂರು, ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಇದ್ದಕ್ಕಿದ್ದಂತೆ ಜೋರಾಗಿ ಸುರಿದ ಮಳೆಯಿಂದಾಗಿ, ವಾತಾವರಣ ತಂಪಾಗಿದೆ.

ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ಕಾಣಿಯೂರು, ಸುಬ್ರಹ್ಮಣ್ಯ ಭಾಗದ ಜನರಿಗೆ ಮಳೆ ತಂಪೆರೆದಿದೆ.