ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿಯೇ ಗೆಲುವಿಗೆ ಕಾರಣವಾಗಲಿದೆ | ಒಳಮೊಗ್ರು ಪರ್ಪುಂಜದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಶಾ ತಿಮ್ಮಪ್ಪ

ಪುತ್ತೂರು: ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿಯನ್ನೇ ಗುರಿಯಾಗಿಟ್ಟುಕೊಂಡು ಬಿಜೆಪಿ ಸರಕಾರ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದೆ. ಎಲ್ಲೂ ಒಂದು ವರ್ಗ, ಜಾತಿ ಎಂಬ ಬೇಧವನ್ನು ಮಾಡಿಲ್ಲ. ಆದ್ದರಿಂದ ಈ ಬಾರಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಏರಲಿದೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಒಳಮೊಗ್ರು ಪರ್ಪುಂಜ ಬಾರಿಕೆ ನಿವಾಸಿ ನಾರಾಯಣ ಶೆಟ್ಟಿ ಅವರ ಮನೆಯಲ್ಲಿ ನಡೆದ ಒಳಮೊಗ್ರು ಶಕ್ತಿ ಕೇಂದ್ರ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಅತಿ ಹೆಚ್ಚು ಕಾರ್ಯಕರ್ತರ ಪಡೆಯನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಇಡೀ ಜಗತ್ತು ಭಾರತದ ಕಡೆ ಮುಖ ಮಾಡುವಂತೆ ಅಭಿವೃದ್ಧಿ ಮಾಡಿದ ಸರಕಾರ ಬಿಜೆಪಿ. ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು, ಕ್ಷೇತ್ರದ ಮನೆ ಮನೆಗಳಲ್ಲಿ ಬಿಜೆಪಿ ಪರವಾದ ವಾತವರಣ ನಿರ್ಮಾಣವಾಗಿದೆ ಎಂದು  ತಿಳಿಸಿದರು.































 
 

ಮತಾಂತರ ನಿಷೇಧ ಕಾಯ್ದೆ:

ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದ ಪಕ್ಷ ಕಾಂಗ್ರೆಸ್. ಮತಾಂತರಕ್ಕೆ ಪ್ರತ್ಯಕ್ಷ ಕುಮ್ಮಕ್ಕು ನೀಡಿ ಸಾಮಾಜಿಕ ಪಿಡುಗು ಉಂಟು ಮಾಡಿ ಅನಿಷ್ಠತೆ ಸೃಷ್ಟಿ ಮಾಡಿದ್ದ ಕಾಂಗ್ರೆಸ್ ನೀತಿಗೆ ವಿರುದ್ಧವಾಗಿ ಮತಾಂಧ ಟಿಪ್ಪುವಿನ ವಿವಾದಿತ ಜಯಂತಿಯನ್ನು ರದ್ದುಗೊಳಿಸಿದ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಸರಕಾರ ನಮ್ಮ ಬಿಜೆಪಿ ಎಂದು ಆಶಾ ತಿಮ್ಮಪ್ಪ ತಿಳಿಸಿದರು.

ಗೋ ಹತ್ಯಾ ನಿಷೇಧ ಕಾಯ್ದೆ:

ನಮ್ಮ ಹೈನುಗಾರರ ಸ್ವಾಭಿಮಾನದ ಬದುಕಿನ ಪ್ರತೀಕವಾದ, ವಿಶ್ವದ ಜನನಿ ಹಿಂದೂಗಳ ಶ್ರದ್ಧಾ ಮಾತೆ ಗೋವಿನ ಮೂಲಕ ಬದುಕು ಕಟ್ಟಿಕೊಂಡ ಲಕ್ಷಾಂತರ ಕುಟುಂಬಗಳು ನಮ್ಮ ಕಣ್ಣ ಮುಂದಿವೆ. ಹಾಲು ಮಾರಿ ಬದುಕು ಕಟ್ಟಿಕೊಂಡ ಬಡಪಾಯಿ ಕುಟುಂಬಗಳ ಹಟ್ಟಿಯಿಂದಲೇ ಹಸುಗಳನ್ನು ಕದ್ದೊಯ್ಯುವ ಕಟುಕರಿಗೆ ಕಡಿವಾಣ ಹಾಕಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದ ಸರಕಾರವಿದ್ದರೆ ಅದು ಬಿಜೆಪಿ ಸರಕಾರ ಎಂದು ಆಶಾ ತಿಮ್ಮಪ್ಪ ತಿಳಿಸಿದರು.

ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ. ನಾರಾಯಣ್, ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಮೀನಾಕ್ಷಿ ಮಂಜುನಾಥ್, ತ್ರಿವೇಣಿ ಕರುಣಾಕರ ಪೆರ್ವೋಡಿ, ಸುನೀಲ್ ದಡ್ಡು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top