ಪುತ್ತೂರು: 2023ರ ಶೈಕ್ಷಣಿಕ ವರ್ಷದ ಯುವಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಳ್ಯದ ತನ್ವಿ ಮನುಜೇಶ್ ಅವರನ್ನು ಇಸ್ರೋ ಸಂಸ್ಥೆ ಯುವ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ.
ಶಾಲಾ ಮಕ್ಕಳಿಗಾಗಿ ಇರುವ ಯುವ ವಿಜ್ಞಾನಿ ಪುರಸ್ಕಾರ “ಯುವಿಕಾ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು, ಇದು ಯುವ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ, ಇತರ ಉದಯೋನ್ಮುಖ ಪ್ರವೃತ್ತಿಗಳಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ವಿಜ್ಞಾನ, ಅಪ್ಲಿಕೇಶನ್ ಗಳ ಕುರಿತು ಮೂಲಭೂತ ತಂತ್ರಜ್ಞಾನವನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು “ಕ್ಯಾಚ್ ದೆಮ್ ಯಂಗ್ “ ಎಂದು ಶೀರ್ಷಿಕೆ ಅಡಿಯಲ್ಲಿ ಇಸ್ರೋ ರೂಪಿಸಿದೆ.
ಇಸ್ರೋ ಪ್ರಸಕ್ತ ವರ್ಷ ದೇಶದಲ್ಲಿ ಆಯ್ಕೆ ಮಾಡಿದ 350 ವಿದ್ಯಾರ್ಥಿಗಳಲ್ಲಿ ಮೊದಲಿಗಳಾಗಿ ತನ್ವಿ ಆಯ್ಕೆಯಾಗಿದ್ದಾರೆ. ಮುಡಿಪು ಜವಾಹರ್ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.