ಪುತ್ತೂರು: 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆ ಭೇಟಿ ಮಾಡಿ ಮತದಾನ ಮಾಡಿಸುವ ಕಾರ್ಯ ಏ.29 ರಿಂದ ಮೇ 6 ರ ತನಕ ನಡೆಯಲಿದ್ದು, ಈ ನಿಟ್ಟಿನಲ್ಲಿ ನಿಯೋಜಿತ ಮತದಾನ ಅಧಿಕಾರಿ ಮತ್ತು ಸಿಬಂದಿ ವರ್ಗದವರಿಗೆ ತರಬೇತಿ ಕಾರ್ಯಕ್ರಮ ಭಾನುವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
104 ಪೋಲಿಂಗ್ ಆಫೀಸರ್, 41 ಮಂದಿ ಮೈಕ್ರೋ ಅಬ್ಸರ್‌ವರ್ ಮತ್ತು 20 ಮಂದಿ ಸೆಕ್ಟರ್ ಆಫೀಸರ್ ಗಳಿಗೆ 3 ಕೊಠಡಿಗಳಲ್ಲಿ ಪ್ರತ್ತೇಕವಾಗಿ ತರಬೇತಿ ನೀಡಿಲಾಯಿತು.
ಏ. 29, ರಿಂದ ಮೇ1 ಹಾಗೂ ಮೇ2 ರಂದು ಪ್ರಥಮ ಹಂತ ಹಾಗೂ ಮೇ3 ರಿಂದ 5 ರ ತನಕ ಎರಡನೇ ಹಂತದ ಮತದಾನ ಪ್ರಕ್ರಿಯೆ ಈ ವಿಶೇಷ ವರ್ಗದವರಿಗೆ ಮನೆಗೆ ತೆರಳಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.