ಇಂದು ಶೂನ್ಯ ನೆರಳಿನ ದಿನ

ನಿಮ್ಮ ನೆರಳು ನಿಮಗೇ ಕಾಣಿಸದ ಪ್ರಾಕೃತಿಕ ಚಮತ್ಕಾರ

ಪುತ್ತೂರು : ಪುತ್ತೂರಿನಲ್ಲಿ ಇಂದು(ಎ. 23) ಮುಂಬರುವ ದಿನಗಳಲ್ಲಿ ಸೂರ್ಯನು ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ, ನೀವು ಇರುವ ಸ್ಥಳಕ್ಕೆ ಅವಲಂಬಿತವಾಗಿ ಸೂರ್ಯನು ಖಮಧ್ಯದ ಮೂಲಕ ಅಂದರೆ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ನೀವು ನಿಂತಿರುವ ಸ್ಥಳದಿಂದ ನೆತ್ತಿಯ ಮೇಲಿರುವ ಬಿಂದು ವನ್ನು ಖಮಧ್ಯ(ನಿತ್) ಎನ್ನುತ್ತಾರೆ. ಭೂಮಿಯು ಗೋಳಾಕಾರದಲ್ಲಿ ರುವುದರಿಂದ ಈ ಬಿಂದುವು ಆಕಾಶಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.

ಬೇರೆ ಯಾವುದೇ ಸಮಯದಲ್ಲಿ, ಸೂರ್ಯನು ನಿಮ್ಮನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ನಿಮ್ಮ ನೆರಳು ನಿಮ್ಮ ಸುತ್ತಲಿನ ನೆಲದ ಮೇಲೆ ಬೀಳುತ್ತದೆ. ಸೂರ್ಯನು ಆಕಾಶದಲ್ಲಿ ಮೇಲೇರುತ್ತಿದ್ದಂತೆ, ನೆರಳಿನ ಉದ್ದವು ಕಡಿಮೆಯಾಗುತ್ತದೆ. ಮತ್ತು ಈ ದಿನ, ಸೂರ್ಯನು ನಿಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ, ನಿಮ್ಮ ನೆರಳು ನೇರವಾಗಿ ನಿಮ್ಮ ಕೆಳಗಿರುತ್ತದೆ. ನೀವು ನಿಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ ಅಥವಾ ಇದನ್ನು ಶೂನ್ಯ ನೆರಳು ಎನ್ನುತ್ತೇವೆ.



































 
 

ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ (ಗ್ಲೋಬ್ ಗಳನ್ನು ತಯಾರಿಸಿದಂತೆ) ಭೂಮಿಯು ಸೂರ್ಯನ ಸುತ್ತ ಚಲಿಸುವಾಗ ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗು ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿ ಕೊಳ್ಳುತ್ತಾನೆ.

ಭೂಮಿಯು 23.5 ಡಿಗ್ರಿ ಕೋನದಲ್ಲಿಬಾಗಿರುವುದರಿಂದ(ಗೋಬ್‌ಗಳನ್ನು ತಯಾರಿಸಿದಂತೆ) ಭೂಮಿಯು ಸೂರ್ಯನ ಸುತ್ತ ಚಲಿಸುವಾಗ ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗು ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿ ಕೊಳ್ಳುತ್ತಾನೆ. ಈ ಎರಡು ದಿನಗಳು ಪ್ರತಿ ವರ್ಷದ ಏಪ್ರಿಲ್-ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಸಂಭಸುತ್ತವೆ. ಆಗಸ್ಟ್ ತಿಂಗಳು ಮಳೆಗಾಲವಾಗಿದ್ದರಿಂದ ಬೇಸಿಗೆ ಕಾಲದ ಏಪ್ರಿಲ್ ತಿಂಗಳಿನಲ್ಲಿ ಈ ಶೂನ್ಯ ನೆರಳಿನ ದಿನಗಳನ್ನು ನೋಡುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಉಪಕರಣಗಳನ್ನು ಬಳಸದೆ ಗಮನಿಸ ಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದೂ ಒಂದು.

ಈ ವರ್ಷ ಮಂಗಳೂರಿನ ಜನರು ಎಪ್ರಿಲ್ 24ರಂದು ಅಪರಾಹ್ನ 12:28 ಕ್ಕೆ ಮತ್ತು ಉಡುಪಿಯ ಜನತೆ ಎ.25ರಂದು ಅಪರಾಹ್ನ 12:29ಕ್ಕೆ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಬಹುದು. ಬೆಂಗಳೂರಿನ ಜನರು ಈ ವಿದ್ಯಮಾನವನ್ನು ಎ.24ರಂದು ಮಧ್ಯಾಹ್ನ 12:18ಕ್ಕೆ ನೋಡಬಹುದು.

ಕರ್ನಾಟಕದ ವಿವಿಧೆಡೆ ಶೂನ್ಯ ನೆರಳಿನ ದಿನದ ವಿವರ ಹೀಗಿವೆ:

ಎ.22: ಮೈಸೂರು, ಮಡಿಕೇರಿ, ಎ.23: ಮಂಡ್ಯ, ಪುತ್ತೂರು, ಎ.24: ಮಂಗಳೂರು(ದ.ಕ.), ಹಾಸನ, ಬೆಂಗಳೂರು, ಎ.25: ಉಡುಪಿ, ಚಿಕ್ಕಮ ಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಎ.26: ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು, ಎ.27:ಭಟ್ಕಳ, ಶಿವಮೊಗ್ಗ, ಚನ್ನಗಿರಿ, ಎ.28: ಹೊನ್ನವರ, ಕುಮಟ, ಶಿಕಾರಿಪುರ, ಚಿತ್ರದುರ್ಗ.

ಎ.29: ಗೋಕರ್ಣ, ಶಿರಸಿ, ರಾಣೆಬೆನ್ನೂರು, ದಾವಣಗೆರೆ, ಎ.30: ಕಾರವಾರ, ಹಾವೇರಿ, ಮೇ 1:ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಮೇ 2: ಧಾರವಾಡ, ಗದಗ, ಮೇ 3:ಬೆಳಗಾವಿ, ಸಿಂಧನೂರು, ಮೇ 4: ಗೋಕಾಕ್, ಬಾಗಲಕೋಟೆ, ರಾಯಚೂರು, ಮೇ 6:ಯಾದಗಿರಿ, ಮೇ 7: ಜಯಪುರ, ಮೇ 9: ಕಲ್ಬುರ್ಗಿ, ಮೇ 10:ಹುಮ್ನಾಬಾದ್, ಮೇ 11: ಬೀದರ್,

ಮೇಲಿನ ಸ್ಥಳದ ನೆರಳುಗಳು ಪೂರ್ವಕ್ಕೆ ಅಪರಾಹ್ನ 12:15ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಅಪರಾಹ್ನ 12:35ರ ನಡುವೆ ಒಂದು ನಿಮಿಷ ದಲ್ಲಿ ಕಣ್ಮರೆಯಾಗುತ್ತವೆ.

ಇದೇ ಎ.25 ರಂದು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಾರ್ವಜನಿಕರಿಗಾಗಿ ಅಪರಾಹ್ನ 12:15ರಿಂದ ಈ ವಿದ್ಯಮಾನದ ಪ್ರದರ್ಶನವನ್ನು ಆಯೋಜಿಸಲಾ ಗಿದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ, ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಪುಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top