ಶೆಟ್ಟರ್‌, ಸವದಿಗೆ ಟಿಕೆಟ್‌ ನೀಡಿಲ್ಲ, ಇನ್ನೂ ರಮ್ಯಾಗೆ ಕೊಡೋಕಾಗುತ್ತಾ?: ಅಶೋಕ್‌

ಬೆಂಗಳೂರು : ಒಂದಷ್ಟು ಕಾಲದಿಂದ ಸಿನಿಮಾ ಹಾಗೂ ರಾಜಕೀಯದಿಂದಲೇ ಸೈಲೆಂಟಾಗಿದ್ದ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ(v) ಅವರು ಮತ್ತೆ ರಾಜಕೀಯದತ್ತ ತಮ್ಮ ದೃಷ್ಟಿ ಹರಿಸಿದ್ದಾರೆ. ಸದ್ಯಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಾಮಾಜಿಕ ಜಾಲತಾಣಗಳ ಮೂಲಕವೇ ಕೆಲ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ರಮ್ಯಾ ಅವರನ್ನು ಬಿಜೆಪಿಗೆ ಬರುವಂತೆ ಉನ್ನತ ನಾಯಕರು ಆಹ್ವಾನಿಸಿದ್ದರು ಸ್ವತಃ ರಮ್ಯಾ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಬಿಜೆಪಿಗೆ ಬನ್ನಿ ನಾಳೆಯೇ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಆಫರ್‌ ಮಾಡಿದ್ದರು ಎಂದು ಹೇಳಿಕೊಂಡಿದ್ದರು. ಅವರ ಈ ಹೇಳಿಕೆಗೆ ಆರ್‌.ಅಶೋಕ್‌ ತಿರುಗೇಟು ನೀಡಿದ್ದು, ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ. ಚುನಾವಣೆ ಸಮಯದಲ್ಲಿ ಅವರು ಗಿಮಿಕ್‌ ಮಾಡುತ್ತಿದ್ದಾರೆ. ಜಗದೀಶ್‌ ಶೆಟ್ಟರ್‌ರಂತ ಮಾಜಿ ಸಿಎಂ ಹಾಗೂ ಲಕ್ಷ್ಮಣ ಸವದಿಯಂತ ಮಾಜಿ ಡಿಸಿಎಂ ಅಂತವರಿಗೆ ನಾವು ಟಿಕೆಟ್‌ ನೀಡಿಲ್ಲ. ಅಂತದ್ರಲ್ಲಿ ರಮ್ಯಾ ಅವರನ್ನು ಕರೆದು ಯಾಕೆ ಸಚಿವ ಸ್ಥಾನ ಕೊಡೋಣ ಎಂದು ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ. ಅವರು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ಸಂಚಾಲಕರಾಗಿದ್ದರು. ಕಾಂಗ್ರೆಸ್‌ಗೆ ಅನುಕೂಲ ಆಗಲಿ ಎಂದು ಅವರು ಈ ರೀತಿ ಹೇಳಿದ್ದಾರೆ. ನಮ್ಮ ಪಾರ್ಟಿಯಿಂದ ಅವರನ್ನು ಯಾರು ಕರೆದಿಲ್ಲ ಎಂದು ಹೇಳುವ ಮೂಲಕ ಅಶೋಕ್‌ ತಿರುಗೇಟು ನೀಡಿದ್ದಾರೆ.

ಇಂಗ್ಲಿಷ್‌ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ್ದ ರಮ್ಯಾ, ನಾನು ಕೆಲವು ಬಾರಿ ಕಾಂಗ್ರೆಸ್‌ ವಿರುದ್ಧ ಮಾತನಾಡಿದ್ದಾಗ ಬಿಜೆಪಿಯಿಂದ ಆಫರ್‌ ಬಂದಿತ್ತು. ಆದರೆ, ನಾನು ಯಾವುದೇ ಭಿನ್ನಮತ ಹೊಂದಿಲ್ಲದ ಕಾರಣ ಬಿಜೆಪಿಗೆ ಹೋಗಲಿಲ್ಲ. ಹಾಗಂತ ನನಗೆ ಬಿಜೆಪಿ ಮೇಲೆ ದ್ವೇಷ ಇಲ್ಲ. ಆದರೆ, ಅವರ ಕೆಲವೊಂದು ಸಿದ್ಧಾಂತಗಳಿಗೆ ನನ್ನ ವಿರೋಧವಿದೆ ಎಂದು ಹೇಳಿಕೊಂಡಿದ್ದರು.
ಅದಲ್ಲದೇ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಆಕಸ್ಮಿಕವಾಗಿ ಸಲೂನ್‌ ಒಂದರಲ್ಲಿ ಭೇಟಿಯಾಗಿದ್ದೆ. ಆಗ ಅವರು ರಮ್ಯಾ ಅವರೇ ಹೇಗಿದ್ದೀರಾ? ಬಹಳ ವರ್ಷ ಆಯ್ತು ನೋಡಿ. ನೀವು ಏಕೆ ರಾಜಕೀಯವನ್ನು ಬಿಟ್ರಿ? ಮತ್ತೆ ರಾಜಕೀಯಕ್ಕೆ ಬನ್ನಿ, ನಿಮಗೆ ಸಾಮರ್ಥ್ಯವಿದೆ. ರಾಜಕೀಯ ಕ್ಷೇತ್ರವನ್ನು ಬಿಡಬೇಡಿ ಎಂದು ಸಲಹೆ ನೀಡಿದ್ದರು ಎಂದು ರಮ್ಯಾ ಹೇಳಿದ್ದರು.

ಕಾಂಗ್ರೆಸ್‌ ಈ ಬಾರಿ 6 ಕ್ಷೇತ್ರಗಳ ಟಿಕೆಟ್‌ ಅನ್ನು ನನಗೆ ಆಫರ್‌ ನೀಡಿತ್ತು ಎಂಬ ವಿಚಾರವನ್ನು ರಮ್ಯಾ ಅವರು ಬಹಿರಂಗಪಡಿಸಿದ್ದು, ಈ 6 ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ನಾನು ಇನ್ನೂ ತಯಾರಾಗಿಲ್ಲ. ಚುನಾವಣೆಗೆ ನಿಲ್ಲಲು ಗ್ರೌಂಡ್‌ನಲ್ಲಿ ಕೆಲಸ ಮಾಡಬೇಕು. ಅದಕ್ಕೆ ಸಂಪೂರ್ಣ ಸಮಯವನ್ನು ವಿನಿಯೋಗಿಸಬೇಕು. ಅದು ಈಗ ನನಗೆ ಸಾಧ್ಯವಿಲ್ಲ. ನಾನು ಸ್ಪರ್ಧಿಸದೇ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದೇನೆ ಎಂದು ರಮ್ಯಾ ತಿಳಿಸಿದ್ದರು.































 
 

2013ರ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಟಿ ರಮ್ಯಾ ರಾಜ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ತಂಡದ ಸಾರಥ್ಯ ವಹಿಸಿದ್ದರು ರಾಹುಲ್ ಗಾಂಧಿ ಅವರ ಸಾಮಾಜಿಕ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಆದರೆ ನಿಧಾನವಾಗಿ ಅಲ್ಲಿಂದಲೂ ದೂರವಾಗಿದ್ದರು. ಆದರೆ ಇತ್ತೀಚೆಗೆ ರಮ್ಯಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಸಾಮಾಜಿಕ ಜಾಲತಾಣಗಳ ಮೂಲಕವೇ ಕೆಲ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಸ್ಟಾರ್ ಪ್ರಚಾರರಕ್ಕೆ ರಮ್ಯಾ ಅವರ ಹೆಸರು ಇದೆ. ಅವರು ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top