ಅಯೋಧ್ಯೆಯಲ್ಲಿ 155 ರಾಷ್ಟ್ರಗಳ ನೀರಿನ ಸಂಗಮ
ಅಯೋಧ್ಯೆ : ಉಜೈಕಿಸ್ತಾನ್, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ 155 ನದಿಗಳ ನೀರು ಗುರುವಾರ ಬೆಳಗ್ಗೆ ಅಯೋಧ್ಯೆಗೆ ತಲುಪಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 23 ರಂದು ಈ ನದಿಗಳ ನೀರಿನಿಂದ ಅಯೋಧ್ಯೆಯ ಶ್ರೀ ರಾಮನಿಗೆ ‘ಜಲಾಭಿಷೇಕ’ ಮಾಡಲಿದ್ದಾರೆ. ದೆಹಲಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ, ನೀರು ಸಂಗ್ರಹದ ಹಿಂದಿರುವ ವ್ಯಕ್ತಿ ವಿಜಯ್ ಜಾಲಿ, ಅಂಟಾರ್ಕ್ಷಿಕಾದಿಂದ ಕೂಡ ನೀರನ್ನು ತರಲಾಗಿದೆ ಎಂದು ತಿಳಿಸಿದ್ದಾರೆ.
ತಾಂಜಾನಿಯಾ, ನೈಜೀರಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ನೇಪಾಳ, ಭೂತಾನ್, ಮಾಲೀವ್ ಮತ್ತು ಬಾಂಗ್ಲಾದೇಶದಂತಹ ದೇಶಗಳ ನದಿಯ ನೀರಿನಿಂದ ನಾಳೆ ಅಯೋಧ್ಯೆಯಲ್ಲಿ ರಾಮನಿಗೆ ಜಲಾಭಿಷೇಕ ನಡೆಯಲಿದೆ. ಬಹುತೇಕ ದುರ್ಗಮವಾಗಿರುವ ಅಂಟಾರ್ಟಿಕಾದಿಂದ ನೀರು ತರಲಾಗಿದೆ ಎಂದು ಜಾಲಿ ಹೇಳಿದರು. ಅಯೋಧ್ಯೆಯ ಮಣಿರಾಮ್ ದಾಸ್ ಚಾಟ್ನ ಆಡಿಟೋರಿಯಂನಲ್ಲಿ ಏಪ್ರಿಲ್ 23 ರಂದು ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಎಂ ಯೋಗಿ ತಂಡದಿಂದ ಜಲ ಕಲಶವನ್ನು ಪಡೆದ ನಂತರ ‘ಜಲ ಕಲಶ’ಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಪಪಂಚದಾದ್ಯಂತದ ದೇಶಗಳಿಂದ ತರಲಾದ ನೀರಿನಲ್ಲಿ ಆ ದೇಶಗಳ ಧ್ವಜಗಳು, ಅವುಗಳ ಹೆಸರುಗಳು ಮತ್ತು ನದಿಗಳ ಹೆಸರುಗಳನ್ನು ಹೊಂದಿರುವ ಸ್ಪಿಕ್ಕರ್‌ಗಳನ್ನು ಲಗತ್ತಿಸಲಾಗಿದೆ. ಹಲವು ದೇಶಗಳ ರಾಯಭಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಾಕಿಸ್ತಾನದ ನೀರನ್ನು ಮೊದಲು ಪಾಕಿಸ್ತಾನದ ಹಿಂದೂಗಳು ದುಬೈಗೆ ಕಳುಹಿಸಿದರು ಮತ್ತು ನಂತರ ಅದನ್ನು ದುಬೈನಿಂದ ದೆಹಲಿಗೆ ತರಲಾಯಿತು, ಅಲ್ಲಿಂದ ಜಾಲಿ ಅವರು ಅದನ್ನು ಅಯೋಧ್ಯೆಗೆ ತರಿಸಿದ್ದಾರೆ. ಪಾಕಿಸ್ತಾನವಲ್ಲದೆ, ಸುರಿನಾಮ್, ಉಕ್ರೇನ್, ರಷ್ಯಾ, ಕಜಕಿಸ್ತಾನ್, ಕೆನಡಾ ಮತ್ತು ಟಿಬೆಟ್ ಸೇರಿದಂತೆ ಹಲವು ದೇಶಗಳ ನದಿಗಳಿಂದಲೂ ನೀರು ಬಂದಿದೆ