ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡ ಅಮಿತ್ ಶಾ
ಬೆಂಗಳೂರು : ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಕಟೌಟನ್ನು ಟವೆಲ್‌ನಿಂದ ಒರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ‘ಸುಂದರ’ ವೀಡಿಯೊ ಎಂದು ಬಣ್ಣಿಸಿದ್ದಾರೆ. ಶುಕ್ರವಾರ ಸಂಜೆ ಕರ್ನಾಟಕದ ದೇವನಹಳ್ಳಿಯಲ್ಲಿ ಶಾ ಅವರ ರೋಡ್‌ಶೋಗೆ ಮುಂಚಿತವಾಗಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಮಳೆಯಿಂದಾಗಿ ರೋಡ್‌ಶೋ ರದ್ದಾಗಿದೆ. ಆದರೆ, ಮಳೆ ನಿಂತ ಮೇಲೆ ಸ್ಥಳದಲ್ಲಿ ಹಾಕಲಾಗಿದ್ದ ಪ್ರಧಾನಿ ಮೋದಿ ಅವರ ಕಟೌಟನ್ನು ರೈತನೊಬ್ಬ ಒರೆಸುವ ದೃಶ್ಯ ಕಂಡು ಬಂತು. ವೀಡಿಯೋವನ್ನು ಸೆರೆಹಿಡಿದ ವ್ಯಕ್ತಿ ಕಟೌಟ್ ಒರೆಸಲು ನಿಮಗೆ ಹಣ ನೀಡಿದ್ದಾರ ಎಂದು ಕೇಳಿದಾಗ, ಇದು ಪ್ರೀತಿ ಮತ್ತು ವಿಶ್ವಾಸ, ಮೋದಿ ಏನೂ ಮಾಡಿಲ್ಲ ಎಂದು ನೀವು ಭಾವಿಸುತ್ತೀರಾ? ಮೋದಿ ದೇವರು….ಎಂದು ರೈತ ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿರುವುದನ್ನು ಕಾಣಬಹುದು.
ಕರ್ನಾಟಕ ಬಿಜೆಪಿ ಹಂಚಿಕೊಂಡಿರುವ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಶಾ, ಪ್ರಧಾನಿ ನರೇಂದ್ರ ಮೋದಿ ಜಿ ಅವರ ಮೇಲಿನ ಅಚಲವಾದ ನಂಬಿಕೆ ಮತ್ತು ಅವರ ಮೇಲಿನ ನಿಸ್ವಾರ್ಥ ಪ್ರೀತಿಯನ್ನು ಕೊಂಡಾಡಿದ್ದಾರೆ. ದೇವನಹಳ್ಳಿಯ ಈ ಸುಂದರವಾದ ವೀಡಿಯೊವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ.