ಕಾಂಗ್ರೆಸ್ ನಲ್ಲಿ ಇಲ್ಲದ ಜಾತಿ ರಾಜಕಾರಣ ಬಿಜೆಪಿಯಲ್ಲಿ ಯಾಕೆ ? | ಸಂಘಟನೆಯಲ್ಲಿ ಹಿರಿಯರ ಅಭಿಪ್ರಾಯದ ಪಾತ್ರ ಮಹತ್ವ| ಹಿಂದುತ್ವ ಮತ್ತು ಬಿಜೆಪಿ ಎಂದು ಹೇಳಿ ಪಕ್ಷೇತರವಾಗಿ ನಿಂತು ಮೂರನೆಯವನಿಗೇ ಲಾಭ ಮಾಡಿಕೊಡುವರೇ ?

ಪುತ್ತೂರು: ಬಿಜೆಪಿ ಪಕ್ಷದ ಅಭ್ಯರ್ಥಿ ಜಾತಿ ಅಧಾರಿತ ಎನ್ನುವ ಮತ್ತು ‌ಚರ್ಚಿಸುವ ಜನತೆ ಮತ್ತೊಮ್ಮೆ ಪುತ್ತೂರಿನ ರಾಜಕೀಯದ ಕುರಿತು ಯೋಚಿಸಬೇಕಾದ ಅಗತ್ಯವಿದೆ.

ಕಳೆದ ಹಲವಾರು ವರ್ಷಗಳ ಪುತ್ತೂರಿನ ರಾಜಕೀಯದ ಮಟ್ಟಿಗೆ ಪುತ್ತೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಲ್ಲಿಯ ತನಕ ಅಯ್ಕೆಯಾದವರು ಯಾರು ಎಂಬುದನ್ನು ಯೋಚಿಸಬೇಕಾಗಿದೆ. ಸುಧಾಕರ ಶೆಟ್ಟಿ, ಬೊಂಡಾಲ ಜಗನ್ನಾಥ ಶೆಟ್ಟಿ, ಶಕುಂತಲಾ ಶೆಟ್ಟಿ, ಅಶೋಕ್ ರೈ. ಹೀಗಿದ್ದೂ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭ್ಯರ್ಥಿ ಬಗ್ಗೆ ಯಾರೂ ಜಾತಿ ರಾಜಕರಣದ ಕುರಿತು ಹೇಳಲ್ಲ, ಯಾರೂ ಮತ ವಿಭಾಜನೆ ಮಾಡಲು ಬಂಡಾಯ ಹೋಗುವುದಿಲ್ಲ. ಅಭ್ಯರ್ಥಿ ಯ ಪ್ರಾಯ ಅಡ್ಡ ಬರುದಿಲ್ಲ, ಜಾತಿ ಅಡ್ಡ ಬರುವುದಿಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮತದಾರರು ಚರ್ಚೆ ಮಾಡುವುದಿಲ್ಲ. ಜತೆಗೆ ಸಿದ್ಧಾಂತ, ಕಾರ್ಯಯೋಜನೆ ಇಲ್ಲ.

ಬಿಜೆಪಿಗೆ ಇದ್ದಷ್ಟು ಪರ್ಯಾಯ ಸಂಘಟನೆಯ ಬೆಂಬಲ ಕಾಂಗ್ರೆಸ್ ಗೆ ಇಲ್ಲ. ಗೆಲುವು ಅಗುದಿಲ್ಲ ಇದೆಲ್ಲಾ ಕಾಂಗ್ರೆಸ್ ಗೆ ಗೊತ್ತಿದ್ದರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಹೊರಗಿನಿಂದ ಬಂದ ಅಭ್ಯರ್ಥಿಗೆ ಮತ ಕೇಳ್ತಾರೆ,  ಮತ ಹಾಕ್ತಾರೆ. ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿ ಅದೆಷ್ಟೋ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ರಾತ್ರಿ ಬೆಳಾಗಾಗುವುದರೊಳಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಕೋಡ್ತಾರೆ ಅಂತಾದರೆ ಪಕ್ಷದ ಮೂಲ ಕಾಂಗ್ರೆಸ್ ಮತದಾರರು, ಕಾರ್ಯಕರ್ತರು ಏನು ಮಾಡಬೇಕು ಎಂಬುದನ್ನು ಒಮ್ಮೆ ಹಿಂದುತ್ವ ಕಾರ್ಯಕರ್ತರು, ಸಂಘಟನೆಯ ಕಾರ್ಯಕರ್ತರು, ಬಿಜೆಪಿಯ ಕಾರ್ಯಕರ್ತರು, ಮತದಾರರು ಅಲೋಚನೆ ಮಾಡಬೇಕಾಗಿದೆ.





























 
 

ಹಿಂದೂ ಸಂಘಟನೆಯ ಹಿರಿಯ ನಾಯಕ ಪ್ರಸಾದ್ ಭಂಡಾರಿ ಅವರ ಅಭಿಪ್ರಾಯದಂತೆ ಅರುಣ್ ಕುಮಾರ್ ಪುತ್ತಿಲ ಮೂರು ಬಾರಿಯ ಚುನಾವಣೆ ಸಂದರ್ಭದಲ್ಲಿ ತಾನು ಕೂಡಾ ಎಂಎಲ್‍ಎ ಅಭ್ಯರ್ಥಿ ಎಂದು ಬಿಂಬಿಸುತ್ತಾ ಬಂದಿದ್ದಾರೆ. ಅದನ್ನು ಸ್ಪಷ್ಟ ಪಡಿಸಿದ್ದಾರೆ.  ಹಾಗಾಗಿ ಕಾರ್ಯಕರ್ತರ ಅಭಿಲಾಷೆಯಂತೆ ತಾನು ಪಕ್ಷೇತರರಾಗಿ ನಿಂತಿದ್ದೇನೆ ಎಂದು ಸ್ಪಷ್ಟೀಕರಣ ನೀಡಿರುತ್ತಾರೆ.

ಹಿಂದೂ ಧರ್ಮದಲ್ಲಿ ಹಿರಿಯರಿಗೆ ಬಹಳ ಹಿಂದಿನಿಂದಲೂ ವಿಶೇಷ ಸ್ಥಾನಮಾನ, ಗೌರವ ಇರುವುದರಿಂದ ಅದೇ ಪದ್ಧತಿ ಪ್ರಕಾರ ಹಿಂದೂ ಸಂಘಟನೆಯಲ್ಲೂ ಹಿರಿಯರಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ಆದರೆ ಪಕ್ಷ ಅಥವಾ ಹಿಂದೂ ಸಂಘಟನೆಯ ಮೂಲಕ ಹಿರಿಯರು ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಒಪ್ಪಿಕೊಳ್ಳದೆ ಪಕ್ಷೇತರರಾಗಿ ನಿಂತಿರುವುದು ಬಂಡಾಯವಲ್ಲದೆ ಇನ್ನೇನು ? ಅಧಿಕಾರದ ಆಸೆಯಿಂದ ಈ ರೀತಿ ಬಂಡಾವೆದ್ದಿದ್ದಾರೆ ವಿನಃ ಬೇರೆ ಯಾವುದೇ ಆಲೋಚನೆಯಿಂದಲ್ಲ.

ನಮ್ಮ ಬಿಜೆಪಿ  ಪಕ್ಷಕ್ಕೆ ಒಂದು ತತ್ವ ಸಿದ್ದಾಂತವು ಇದೆ. ರಾಷ್ಟ್ರೀಯತೆ ಹಿಂದುತ್ವ ಇದೆ. ಆದರೂ ನಾವು ನಮ್ಮ ಅಭ್ಯರ್ಥಿ, ಸಂಘದ ಮನೆಯ ತಾಯಿ, ಮೂರು ತಲೆ ಮಾರಿನಿಂದ ಸಂಘ, ಬಿಜೆಪಿ ಜೊತೆ ಕೆಲಸ ಮಾಡಿದ ಮನೆ ಮಗಳಿಗೆ ಈ ಭಾರಿ ಅಭ್ಯರ್ಥಿ ಮಾಡಿದ್ರೆ ಮೊಸರಲ್ಲೂ ಕಲ್ಲು ಹುಡುಕುವ ತರ ಪಕ್ಷಕ್ಕೆ ಅಪವಾದ, ಅಪಪ್ರಚಾರ ಮಾಡುವುದು ಸರಿಯೇ? ಬಿಜೆಪಿ ಗೆಲುವು ಪುತ್ತೂರಿಗೆ ಅನಿವಾರ್ಯ. ಪುತ್ತೂರಿನಲ್ಲಿ ಬಿಜೆಪಿ ಗೆಲ್ಲಲೇ ಬೇಕು. ಅದಕ್ಕೆ ನಾವೆಲ್ಲರೂ ಹಿಂದುತ್ವಕ್ಕಾಗಿ, ಭವಿಷ್ಯದ ಪಿಳಿಗೆಗಾಗಿ ಪಣತೋಡೋಣ. ಬಿಜೆಪಿಗೆ ನಮ್ಮ ಮತ . ಭವಿಷ್ಯದ ನಾಳೆಗಾಗಿ ಎಂದು ಮತದಾರರು ಈ ರೀತಿಯ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಹಿಂದಿನ ಕಾರ್ಯವೈಖರಿ ಪ್ರಕಾರ ಅರುಣ್ ಕುಮಾರ್ ಪುತ್ತಿಲರು  ತಮ್ಮಲ್ಲಿ ಯಾರೂ ಬಂದು ಸಹಾಯ ಕೇಳಿದರೂ ಬಹಳಷ್ಟು ಸಹಾಯ ಮಾಡುವ ವ್ಯಕ್ತಿಯೆಂದು ಬಿಂಬಿಸುವವರಿಗೆ ಅವರೇ ಒಂದು ನಿದರ್ಶನವಾಗಿದ್ದು, ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಪಘಾತದ ಸಂದರ್ಭದಲ್ಲಿ ತನ್ನ ಪ್ರಚಾರಕ್ಕೋಸ್ಕರ ಅಪಘಾತಕ್ಕೋಳಗಾದ ವ್ಯಕ್ತಿಗಳನ್ನು ವಿಚಾರಿಸುವುದು, ಆಸ್ಪತ್ರೆಗೆ ಸೇರಿಸುವುದು ಇತ್ಯಾದಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು. ಆದರೆ ತನ್ನ ಕಾರಿಗೇ ಒಬ್ಬ ಮಹಿಳೆ ಡಿಕ್ಕಿಯಾಗಿ ಆ ಮಹಿಳೆ ಸಾವನ್ನಪ್ಪಿದರೂ ಆ ಮಹಿಳೆಯನ್ನು ವಿಚಾರಿಸದೇ, ಆಸ್ಪತ್ರೆಗೆ ಸೇರಿಸದೇ ಬಂದಿದ್ದು, ಈ ಒಂದು ನಿದರ್ಶನ ಇವರ ಇಡೀ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.

ಈ ಮೇಲಿನ ವಿವರ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top