ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಚುನಾವಣಾ ಏಜೆಂಟರಾಗಿ ಪುತ್ತೂರು ವಕೀಲರ ಸಂಘದ ನಿಟಕಪೂರ್ವ ಅಧ್ಯಕ್ಷ , ಸಿವಿಲ್ ವಕೀಲ ಭಾಸ್ಕರ ಗೌಡ ಕೋಡಿಂಬಾಳ ಅವರನ್ನು ನೇಮಕ ಮಾಡಲಾಗಿದೆ.
ಅಭ್ಯರ್ಥಿಯ ಪರವಾಗಿ ಚುನಾವಣಾ ಆಯೋಗದ ನಿಯಮದ ಪ್ರಕಾರ ಪ್ರತಿನಿಧಿಯನ್ನು ನಿಯೋಜಿಸಲು ಅವಕಾಶವಿದ್ದು ಈ ನೇಮಕ ಮಾಡಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಸಂಚಾಲಕರೂ ಆಗಿರುವ ಭಾಸ್ಕರ ಗೌಡರು ಇತ್ತೀಚೆಗೆ “ಬುತ್ತಿ ಊಟ” ಎಂಬ ಕೃತಿಯೊಂದಿಗೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿರುವ ಭಾಸ್ಕರ ಗೌಡರು ಸಂಘಟನೆ, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಕೊಂಡಿದ್ದು, ಕರ್ನಾಟಕ ರಾಜ್ಯ ಮದ್ಯ ಸಂಯಮ ಮಂಡಳಿಯ ಮಾಜಿ ನಿರ್ದೇಶಕರಾಗಿದ್ದು, ಒಕ್ಕಲಿಗ ಗೌಡ ನ್ಯಾಯ ತೀರ್ಮಾನ ಸಮಿತಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಪೂರ್ವದ ಸ್ವರ್ಣ ನಿಯೋಜಿತ ವಲಯ ಸೇನಾನಿಯಾಗಿದ್ದಾರೆ.