ಪುತ್ತೂರು: ಮಾರ್ಚ್ 2023 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ ವಾಣಿಜ್ಯ ವಿಭಾಗದ 25 ಮತ್ತು ವಿಜ್ಞಾನ ವಿಭಾಗದ 6 ಅಭ್ಯರ್ಥಿಗಳು ಸೇರಿದಂತೆ ಒಟ್ಟು 34 ವಿದ್ಯಾರ್ಥಿಗಳು ಹಾಜರಾಗಿದ್ದು, 31 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಪೈಕಿ 7 ವಿಶಿಷ್ಟ ಶ್ರೇಣಿ,15 ಪ್ರಥಮ ಹಾಗೂ 3 ದ್ವಿತೀಯ ಹಾಗೂ 6 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತೇಜಸ್ ಕೆ. (531) ಲೋಕನಾಥ ಮತ್ತು ಶಶಿಕಲಾ ಕುದ್ಮಾರು ದಂಪತಿ ಪುತ್ರ, ನಿಶಾಂತ್ ಡಿ. ಎಚ್ (521) ಹೊನ್ನಪ್ಪ ಗೌಡ ಮತ್ತು ಸಾವಿತ್ರಿ ದಂಪತಿ ಪುತ್ರ, ಪ್ರಣವ್ ಕೆ.ಯು. (513) ಉಮೇಶ್ ಎಂ. ಹಾಗೂ ಶೀಲಾವತಿ ಸವಣೂರು ದಂಪತಿ ಪುತ್ರ.
ವಾಣಿಜ್ಯ ವಿಭಾಗದ ಎಂ.ಪ್ರಣವಿ ರೈ (577) ಎಂ.ಸುಧಾಕರ ರೈ ಮತ್ತು ದೀಪಿಕಾ ರೂ ಮಾಳ ದಂಪತಿ ಪುತ್ರಿ, ಮಾನ್ವಿ ಬಿ.ಸಿ. (550) ಚಂದ್ರಶೇಖರ ಗೌಡ ಬಿ. ಹಾಗೂ ಸುಮಿತ್ರಾ ಬಿ.ಸಿ. ಬೀರುಸಾಗು ದಂಪತಿ ಪುತ್ರಿ, ಫಾತಿಮತ್ ನಿಶಾ (545) ಸುಲೈಮಾನ್ ಮತ್ತು ಜೊಹರಾ ಸವಣೂರು ದಂಪತಿ ಪುತ್ರಿ, ಹರ್ಷಿತ್ ಕೆ.ಡಿ. (526) ಧರ್ಮಪಾಲ ಕೆ.ವಿ. ಮತ್ತು ಧರ್ಮಾವತಿ ದಂಪತಿ ಪುತ್ರ,