ಪುತ್ತೂರು: ಯಾವುದೇ ಭ್ರಷ್ಟಾಚಾರ, ಕ್ರಿಮಿನಲ್ ಕೇಸ್ ಇಲ್ಲದ ಸಚಿವ ಸುಳ್ಯದ ಅಂಗಾರ ಅವರಿಗೆ ಈ ಬಾರಿ ಅವಕಾಶ ನೀಡದಿರುವುದು ಜಿಲ್ಲಾ ಮೊಗೇರ ಸಮುದಾಯಕ್ಕೆ ಅತೀವ ಬೇಸರ ತಂದಿದೆ ಎಂದು ಜಿಲ್ಲಾ ಮೊಗೇರ ಸಂಘದ ಸದಸ್ಯ ಪ್ರಸಾದ್ ಬೊಲ್ಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದಿಂದ ಭಾಗೀರಥಿ ಮುರುಳ್ಯ ಅವರಿಗೆ ಅವಕಾಶ ನೀಡಿರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ. ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಭ್ರಷ್ಟಾಚಾರ, ಕ್ರಿಮಿನಲ್ ಕೇಸ್ ಗಳ ಯಾವುದೇ ಕಳಂಕವನ್ನು ಹೊತ್ತುಕೊಳ್ಳದ ಅಂಗಾರರಿಗೆ ಅವಕಾಶ ನೀಡದಿರುವುದು ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರ ಬೀರಿಗ, ಶಿವಕುಮಾರ್, ರೇವತಿ ಉಪಸ್ಥಿತರಿದ್ದರು.