ಮಾಜಿ ಮುಖ್ಯಮಂತ್ರಿ ಬಳಿ 9.58 ಕೋ.ರೂ. ಚರಾಸ್ತಿ, 9.43 ಕೋ.ರೂ. ಸ್ಥಿರಾಸ್ತಿ
ಮೈಸೂರು : ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಪಾರ್ವತಿಯವರೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.
ನಾಮಪತ್ರದ ಜತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ
ಸಿದ್ದರಾಮಯ್ಯ ಅವರು 9.58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ. 16.24 ಕೋಟಿ ರೂ. ಸಾಲ ಇದೆ.
ಸಿದ್ದರಾಮಯ್ಯ ಅವರ ಬಳಿ 21.86 ಲಕ್ಷ ನಗದು ಠೇವಣಿ ಇದ್ದರೆ, ಪಾರ್ವತಿ ಅವರ ಬಳಿ 6.92 ಕೋಟಿ ರೂ. ಠೇವಣಿ ಇದೆ. ಸಿದ್ದರಾಮಯ್ಯ ಅವರ ಬಳಿ 21 ಲಕ್ಷ ಮೌಲ್ಯದ ಚಿನ್ನ, 1.26 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಇವೆ. ಅವರ ಪತ್ನಿ ಬಳಿ 32.40 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 2.83 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಇವೆ.
ಪಾರ್ವತಿ ಅವರು ಸುಮಾರು 16.24 ಕೋಟಿ ರೂಪಾಯಿ ಸಾಲ ಹೊಂದಿದ್ದರೆ, ಸಿದ್ದರಾಮಯ್ಯ ಅವರ ಸಾಲದ ಹೊರೆ 6.84 ಕೋಟಿ ರೂ. ಇದೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಪತ್ನಿ ಪಾರ್ವತಿ ಅವರ ಬಳಿ ಕುಂದಲಹಳ್ಳಿಯಲ್ಲಿ 1.08 ಎಕರೆ, ತೊರಾಯನ ಕಾಟೂರಿನಲ್ಲಿ 7.17 ಎಕರೆ, ವಿಜಯನಗರದಲ್ಲಿ ಕೃಷಿಯೇತರ ಭೂಮಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.