ಪುತ್ತೂರು: ನಗರದ ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಏ.21 ಶುಕ್ರವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಬೆಳಿಗ್ಗೆ 7.3೦ ರಿಂದ ಗಣಪತಿ ಹೋಮ, ಮಹಾಪೂಜೆ, ಪಾಷಾಣ ಮೂರ್ತಿಗೆ ತಂಬಿಲ, ನಾಗದೇವರಿಗೆ ತಂಬಿಲ, ಗುಳಿಗನಿಗೆ ತಂಬಿಲ ನಡೆಯಲಿದೆ.
11 ಗಂಟೆಗೆ ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 1230೦ ಕ್ಕೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, 1.30 ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 4 ರಿಂದ ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜೆ, 6.30 ಕ್ಕೆ ವಿಠಲ್ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಸಂಜೆ 5.30 ರಿಂದ ಮಹಾಪೂಜೆ, ದೇವಿದರ್ಶನ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30 ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಮೇಳದವರಿಂದ ತುಳು ಯಕ್ಷಗಾನ ಬಯಲಾಟ “ಭಂಡಾರ ಚಾವಡಿ” ಪ್ರದರ್ಶನಗೊಳ್ಳಲಿದೆ.
ಏ.23 ರಂದು ಭಾನುವಾರ ರಾತ್ರಿ ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಯನ್..ಐತ್ತಪ್ಪ ಸಪಲ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.