ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ದೂರದ ವೀರಮಂಗಲದಲ್ಲಿ ಶ್ರೀ ದೇವರ ಅವಭೃತ ಸ್ನಾನ ಬುಧವಾರ ಬೆಳಿಗ್ಗೆ 6.45 ಸುಮಾರಿಗೆ ನಡೆಯಿತು.
ಮಂಗಳವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ಹೊರಟ ಶ್ರೀ ದೇವರು ವೀರಮಂಗಲದ ತೆರಳುವ ದಾರಿಯುದ್ದಕ್ಕೂ ಕಟ್ಟೆಪೂಜೆ ಗೊಂಡು ಬುಧವಾರ ಮುಂಜಾನೆ ಹೊತ್ತಿಗೆ ತಲುಪಿದರು.
ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಕ್ತಾದಿಗಳು ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ದೇವರಿಗೆ ಹಣ್ಣುಕಾಯಿ, ಕಾಣಿಕೆ ಅರ್ಪಿಸಿದರು. ಶ್ರೀ ದೇವರ ಜತೆ ಸಾವಿರಾರು ಭಕ್ತಾದಿಗಳು ತೆರಳಿದ್ದರು.