ಗಂಗಾ ಪಾದೇಕಲ್‌ರವರಿಗೆ “ನಿರಂಜನ ಪ್ರಶಸ್ತಿ ಪ್ರದಾನ”

ಪುತ್ತೂರು: ಸಾಹಿತ್ಯ ಎಂಬುವುದು ಎಲ್ಲರದ್ದಲ್ಲ ನಾವು ಅದನ್ನು ಅಪ್ಪಿಕೊಳ್ಳಬೇಕು, ಹಾಗೆಯೇ ನಮ್ಮದು ಎಂದು ಒಪ್ಪಿಕೊಳ್ಳಬೇಕು. ಯಾವುದೇ ಏರು ಪೇರುಗಳನ್ನು ಎದುರಿಸಿದರು, ಮನಸ್ಸು ಮುದುಡಿಹೋದರೂ, ಜೀವನವೇ ಬೇಡ ಎಂದು ನಿರ್ಧಾರವಾದರೂ ನಾವು ನಮ್ಮ ಮನಸನ್ನು ಗಟ್ಟಿಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ವಿದ್ವಾಂಸ ಪ್ರೊ. ವಿ ಬಿ ಅರ್ತಿಕಜೆ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ವಿವೇಕಾನಂದ ಸಂಶೋಧನ ಕೇಂದ್ರ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘದ  ಸಹಯೋಗದಲ್ಲಿ ನಡೆದ ನಿರಂಜನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವೇಕಾನಂದ ಕಾಲೇಜಿನ  ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಮಾತನಾಡಿ, ಮಾನವ ಸಂಬಂಧ ರೂಪಿಸಿಕೊಳ್ಳುವ ಬಗ್ಗೆ ಮತ್ತು ಸಮಾಜದಲ್ಲಿ ಬದುಕುವುದು ಹೇಗೆ ಎಂದು ತಿಳಿಸಿಕೊಟ್ಟರು.







































 
 

ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ,, ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್ ಜಿ ಮಾತನಾಡಿ, ಕಥೆಗಳನ್ನು ಹುಡುಕಿ, ಆರಿಸಿ ಆ ಕಾಲಕ್ಕೆ ಯಾವ ಕಥೆಗಳು ಹೆಚ್ಚು ಪ್ರಸ್ತುತ ಮತ್ತು ಯಾವುದರಲ್ಲಿ ಆಧುನಿ ವಾದಂತಹ  ಪ್ರಗತಿಶೀಲವಾದಂತಹ, ಪ್ರಗತಿಪರವಾದಂತಹ ಚಿಂತನೆಗಳು ಮಹಿಳೆಯರ ಬಗ್ಗೆ ಇದೆ. ಹಾಗೆಯೇ ಇರುವುದನ್ನು ಆಲೋಚನೆ  ಮಾಡಿ ಅದನ್ನು ಆರಿಸಿ  ಪ್ರಕಟ ಮಾಡಿದೆವು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ ಪ್ರೊ ವಿ.ಬಿಅರ್ತಿಕಜೆಯವರು ಗಂಗಾ ಪಾದೇಕಲ್‌ರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ  ಪ್ರಾಂಶುಪಾಲ ಪ್ರೊ. ವಿ?ಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರುಳಿ ಕೃಷ್ಣ ಕೆ ಎನ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ವಂದಿಸಿದರು. ಸಹ ಶಿಕ್ಷಕಿ ಡಾ.ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top