ಮತದಾರ ಜಾಗೃತಿಗಾಗಿ ಬೀದಿ ನಾಟಕ | ಪುತ್ತೂರು ಆಡಳಿತ ಕಚೇರಿ ಎದುರು ಚಾಲನೆ

ಪುತ್ತೂರು: ಇನ್ನೇನು ಚುನಾವಣೆಗೆ ನಾಲ್ಕು ವಾರಗಳು ಇರುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಆಡಳಿತ ಕಚೇರಿ ಎದುರು ಬೀದಿ ನಾಟಕಕ್ಕೆ ಚಾಲನೆ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.

ದ.ಕ.ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಸಹಕಾರದೊಂದಿಗೆ ರೋಟರಿ ಕ್ಲಬ್ ಎಲೈಟ್, ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಸಹಯೋಗದೊಂದಿಗೆ ಸಂಸಾರ ಜೋಡುಮಾರ್ಗ ತಂಡದ ಸಂಚಾಲಕ ಮೌನೇಶ್ ವಿಶ್ವಕರ್ಮ ಬೀದಿನಾಟಕದ ನೇತೃತ್ವ ಮತದಾನ ಜಾಗೃತಿ ಬೀದಿ ನಾಟಕ ನಡೆಯಿತು.

ಸಹಾಯಕ ಚುನಾವಣಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ನಿರ್ಭೀತಿಯಿಂದ ಮತ ಚಲಾಯಿಸಿ. ಈ ನಿಟ್ಟಿನಲ್ಲಿ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ ಎಂದರು.







































 
 

ಸೆಕ್ಟರ್ ಅಧಿಕಾರಿ ಜಿಪಂ ಯೋಜನಾ ನಿರ್ದೇಶಕ ಜಯರಾಮ್, ತಹಶೀಲ್ದಾರ್ ಶಿವಶಂಕರ್ ಶುಭ ಹಾರೈಸಿದರು. ಉಪತಹಶೀಲ್ದಾರ್ ಸುಲೋಚನಾ, ರೋಟರಿ ಕ್ಲಬ್ ಎಲೈಟ್ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಆಸ್ಕರ್ ಆನಂದ್ ಮತ್ತಿತರರು ಉಪಸ್ಥಿತರಿದ್ದರು. 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top