ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಇಂದು ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ತೆರಳಲಿದ್ದಾರೆ.
ಸಂಜೆ ಶ್ರೀ ದೇವರ ಬಲಿ ಹೊರಟು ಬಳಿಕ ರಕ್ತೇಶ್ವರ ದೈವದೊಂದಿಗೆ ನುಡಿಗಟ್ಟು ನಡೆಯಲಿದೆ. ಅದಾದ ಬಳಿಕ ಶ್ರೀ ದೇವರು ವೀರಮಂಗಲಕ್ಕೆ ಸಾವಿರಾರು ಭಕ್ತಾದಿಗಳೊಂದಿಗೆ ತೆರಳಲಿದ್ದಾರೆ.
ಶ್ರೀ ದೇವರು ಮಂಗಳವಾರ ಸಂಜೆ ಹೊರಟು ಬುಧವಾರ ಪ್ರಾತಃಕಾಲ ವೀರಮಂಗಲ ತಲುಪಿ ಅಲ್ಲಿ ಕುಮಾರಧಾರ ನದಿಕಿನಾರೆಯಲ್ಲಿ ಜಳಕ ಮಾಡಿ, ಬಳಿಕ ಕಟ್ಟೆಯಲ್ಲಿ ಪೂಜೆಗೊಂಡು ಪುನಃ ಹಿಂದಿರುಗಲಿದ್ದಾರೆ.
ಸುಮಾರು 15 ಕಿ.ಮೀ. ದೂರದಲ್ಲಿರುವ ವೀರಮಂಗಲಕ್ಕೆ ತೆರಳುವ ದಾರಿಯುದ್ದಕ್ಕೂ ಭಕ್ತಾದಿಗಳು ತಳಿರು ತೋರಣಗಳಿಂದ, ಮಿನಿಚರ್ ಗಳಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಿಂಗರಿಸಿ ಶ್ರೀದೇವರ ಆಗಮಿಸುವಾಗ ಹಣ್ಣುಕಾಯಿ ಅರ್ಪಿಸುತ್ತಾರೆ. ಬಹುತೇಕ ಕಡೆಗಳಲ್ಲಿ ಪಾನಕ, ಅವಲಕ್ಕಿ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.