ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯುತ್ತಿದ್ದು, ಭಾನುವಾರ ರಾತ್ರಿ ದೇವಸ್ಥಾನದ ಪುಷ್ಕರಣಿಯಲ್ಲಿ ಕೆರೆ ಆಯನ, ತೆಪ್ಪೋತ್ಸವ ನಡೆಯಿತು.
ದೇವಸ್ಥಾನದ ಪುಷ್ಕರಣಿಯಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಕಟ್ಟೆಯಲ್ಲಿ ಪೂಜೆಗೊಂಡು, ಪುಷ್ಕರಣಿಯಲ್ಲಿ ಕೆರೆ ಆಯನ ನಡೆಯಿತು.

ರಾತ್ರೀ ಬಲ್ನಾಡಿನಿಂದ ಶ್ರೀ ದಂಡನಾಯಕ, ಉಳ್ಳಾಲ್ತಿ ದೈವಗಳ ಭಂಡಾರ ಬಂದು ಶ್ರೀ ದೇವಸ್ಥಾನವನ್ನು ಪ್ರವೇಶಿಸಿದ ಬಳಿಕ ಜೋಡು ತೆಪ್ಪದಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ ಕಟ್ಟೆಗೆ ತೆರಳಿ ಅಲ್ಲಿ ಪೂಜೆ ನಡೆಯಿತು. ನೆರೆದಿದ್ದ ಭಕ್ತಾದಿಗಳು ತೆಪ್ಪೋತ್ಸವ ಕಂಡು ಪುನೀತರಾದರು.