ಲಖನೌ : ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾಗಿದ್ದ ಜಿಗಾನಾ ಮೇಡ್ ಪಿಸ್ತೂಲ್ ಅನ್ನೇ ಇಬ್ಬರೂ ಸಹೋದರ ಹತ್ಯೆಗೆ ಬಳಸಲಾಗಿದೆ. ಜಿಗಾನಾ ಮೇಡ್ ಪಿಸ್ತೂಲ್ ಅನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ.
ಗುಂಡಿನ ದಾಳಿ ನಡೆಸಿದ್ದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರು ದಾಳಿಕೋರರನ್ನು ಬಂಧಿಸಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 307(ಕೊಲೆಗೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 7, 25 ಮತ್ತು 27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪಿಸ್ತೂಲ್ ಅನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲ. ಇದಕ್ಕೆ ಪರವಾನಗಿಯು ಸಿಗುವುದಿಲ್ಲ. ಈ ಟರ್ಕಿ ನಿರ್ಮಿತ ಪಿಸ್ತೂಲ್ ಅನ್ನು ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ತರಲಾಗುತ್ತದೆ. ಮೂಲಗಳ ಪ್ರಕಾರ, ಇದು ಪಾಕಿಸ್ತಾನದ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತದೆ ಮತ್ತು ಇದು ಡ್ರೋನ್‌ಗಳ ಮೂಲಕ ಗಡಿಯಾಚೆಯಿಂದ ಪೂರೈಕೆಯಾಗುತ್ತದೆ.
ಈ ಪಿಸ್ತೂಲಿನ ಬೆಲೆ ಸುಮಾರು 4 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ಸ್ವಯಂಚಾಲಿತ ಪಿಸ್ತೂಲ್ ಆಗಿದೆ. ಅದರ ಟ್ರಿಗರ್ ಒಂದು ಸಲ ಏಳೆದರೇ ಪಿಸ್ತೂಲ್ ನಲ್ಲಿ ಇರುವ ಎಲ್ಲಾ ಬುಲೆಟ್ ಗಳು ಖಾಲಿಯಾಗುತ್ತದೆ. ಇದೇ ಕಾರಣಕ್ಕೆ ಅತೀಕ್ ಹಾಗೂ ಆತನ ಸಹೋದರನ ಹತ್ಯೆಗೆ ಈ ಪಿಸ್ತೂಲ್ ಬಳಸಲಾಗಿದೆ.