ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ

ದೆಹಲಿ : ಮೋದಿ ಉಪನಾಮವನ್ನು ಲೇವಡಿ ಮಾಡಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿ, ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಇದೀಗ ತನ್ನ ಸರಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ದಿಲ್ಲಿಯ ಲುಟೆನ್ಸ್‌ ನಲ್ಲಿರುವ ಸರಕಾರಿ ಬಂಗಲೆಯಿಂದ ನಿನ್ನೆ ಲಾರಿಗಳಲ್ಲಿ ಸಾಮಾನು ಸರಂಜಾಮು ಸಾಗಿಸುವ ಪ್ರಕ್ರಿಯೆ ಶುರುವಾಗಿದೆ.

ಅಪರಾಧ ಸಾಬೀತಾದ ಕಾರಣ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ಒಂದು ತಿಂಗಳಲ್ಲಿ ಸರಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಅದಕ್ಕಾಗಿ ಅವರಿಗೆ ನೋಟೀಸ್‌ ಜಾರಿಗೊಳಿಸಲಾಗಿತ್ತು. ಏ. 22 ರೊಳಗೆ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭೆಯ ಕಾರ್ಯದರ್ಶಿಯು ರಾಹುಲ್ ಗಾಂಧಿಯರಿಗೆ ಹೇಳಲಾಗಿತ್ತು. ತುಘಲಕ್ ಲೇನ್ ಬಂಗಲೆಯನ್ನು ರಾಹುಲ್​​ ಗಾಂಧಿಯವರಿಗೆ 2005ರಲ್ಲಿ ಉತ್ತರ ಪ್ರದೇಶದ ಅಮೇಥಿನಿಂದ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರಿಗೆ ಮಂಜೂರು ಮಾಡಲಾಯಿತು. ಆದರೆ ಅವರು ಮಾರ್ಚ್​​ 23ರಿಂದ ಲೋಕಸಭೆಯಿಂದ ಅಹರ್ನಗೊಂಡ ನಂತರ ನಿಯಮದ ಪ್ರಕಾರ, ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಮತ್ತು ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ. 2019ರ ಲೋಕಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಎಲ್ಲಾ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ ಹೇಗೆ ಎಂದು ಕೇಳಿದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ನ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ನಾಯಕನನ್ನು ಎರಡು ವರ್ಷಗಳ ಅವಧಿಗೆ ದೋಷಿ ಎಂದು ಘೋಷಿಸಿತು.

ರಾಹುಲ್​​ ಗಾಂಧಿಯವರು ನಿವಾಸ ಖಾಲಿ ಮಾಡುವ ಸಮಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಯಾವಾಗಲೂ ಸರ್ಕಾರಿ ವಸತಿಗೃಹದಲ್ಲಿಯೇ ಇರುತ್ತಿದ್ದರಿಂದ ತನಗೆ ಎಂದಿಗೂ ನನಗೆ ಮನೆ ಇರಲಿಲ್ಲ ಎಂದು ಹೇಳಿದರು. ಈ ಮನೆಗೂ ತನಗೂ ಬಲವಾದ ಬಾಂಧವ್ಯ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್​​ನ ನಾಯಕ ರಾಹುಲ್​ ಗಾಂಧಿ ಅವರು ತಮ್ಮ ನಿವಾಸದಿಂದ ಖಾಲಿ ಮಾಡುತ್ತಾರೆ ಎಂದಾಗ ಕಾಂಗ್ರೆಸ್​ ಅನೇಕ ಸಂಸದರು ನಾನು ಸರ್ಕಾರಿ ಮನೆಯನ್ನು ಖಾಲಿ ಮಾಡುತ್ತೇವೆ ಎಂದು ‘ಮೇರಾ ಘರ್, ಆಪ್ಕಾ ಘರ್’ ಅಭಿಯಾನವನ್ನು ಪ್ರಾರಂಭಿಸಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top