ಪುತ್ತೂರು: ಜಾತ್ರೆಯ ಸಡಗರದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ವರುಣನ ಕೃಪೆಗಾಗಿ ಗಂಗಾರತಿ ನಡೆಯಿತು.
ದೇವಸ್ಥಾನದಲ್ಲಿ ದೇವರ ಬಲಿ ಹೊರಟು, ಕಟ್ಟೆಪೂಜೆ ನಡೆಯುವ ವೇಳೆಯಲ್ಲಿ ಗಂಗಾರತಿ ನಡೆಯಿತು.



ಹಿನ್ನೆಲೆಯಲ್ಲಿ ಮಂತ್ರೋಚ್ಛಾರ ಕೇಳಿ ಬರುತ್ತಿದ್ದಂತೆ, ಪುಷ್ಕರಣಿಯ ನಾಲ್ಕು ದಿಕ್ಕುಗಳಲ್ಲಿ ನೆರೆದ ಭಕ್ತರು ತಮ್ಮ ಕೈಯಾರೆ ಆರತಿ ಬೆಳಗಿದರು.
ಪುಷ್ಕರಣಿಯ ಕಟ್ಟೆ ನಾವೀನ್ಯಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ವರುಣನ ವಿಗ್ರಹ ಕಂಡು ಭಕ್ತರು ಪುನೀತಗೊಂಡಿದ್ದರು. ಬಿರುಬೇಸಗೆಯಿಂದ ಕಂಗೆಟ್ಟ ಜನರು ಇದೀಗ ಗಂಗಾರತಿ ಮಾಡಿ, ತಮ್ಮ ಮನದ ಅಭಿಲಾಷೆ ಈಡೇರಿಸುವಂತೆ ಬೇಡಿಕೊಂಡರು.