ಸಂಜೆ 4 ಗಂಟೆಗೆ ಬಿಜೆಪಿ ಎಂಎಲ್‌ಸಿಗೆ ರಾಜೀನಾಮೆ
ಬೆಂಗಳೂರು : ಬಿಜೆಪಿ ಎಂಎಲ್‌ಸಿ ಲಕ್ಷ್ಮಣ್ ಸವಧಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಲಕ್ಷ್ಮಣ್ ಸವಧಿ ಒಪ್ಪಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, ಸವದಿ ನಮ್ಮ ಕುಟುಂಬದ ಸದಸ್ಯರಾಗಲು ನಿರ್ಧಾರಿಸಿದ್ದಾರೆ . ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಒಪ್ಪಿದ್ದಾರೆ. ಸಂಜೆ 4 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಘೋಷಣೆ ಮಾಡಲಿದ್ದಾರೆ. ಲಕ್ಷ್ಮಣ್ ಸವಧಿ ಅವರನ್ನು ಹೈಕಾಮಾಂಡ್ ಎಲ್ಲಾ ನಾಯಕರು ಒಪ್ಪಿದ್ದಾರೆ. ಸಂಜೆ 4 ಗಂಟೆಗೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಲಕ್ಷ್ಮಣ್ ಸವಧಿ ಮಾತನಾಡಿ, ನನ್ನ ಷರತ್ತುಗಳಿಗೆ ಡಿಕೆಶಿ ಸಿದ್ದರಾಮಯ್ಯ ಒಪ್ಪಿದ್ದಾರೆ. ಸಂಜೆ 4 ಗಂಟೆಗೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು.
ಬಿಜೆಪಿಯಲ್ಲಿ ಸವಧಿಗೆ ಉತ್ತಮ ಭವಿಷ್ಯ ಇತ್ತು – ಬೊಮ್ಮಾಯಿ
ಮಾಧ್ಯಮಗಳೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿ, ಲಕ್ಷ್ಮಣ್ ಸವಧಿ ಕಾಂಗ್ರೆಸ್ ಸೇರಿರುವುದು ಗೊತ್ತಿರುವ ವಿಚಾರವಾಗಿದೆ ಲಕ್ಷ್ಮಣ್ ಸವಧಿ ಜೊತೆ ಹಲವು ವರ್ಷಗಳಿಂದ ನಾನು ಒಟ್ಟಿಗೆ ಕೆಲಸ ಮಾಡಿದ್ದೇನೆ. ಲಕ್ಷ್ಮಣ್ ಸವದಿ ಕಾಂಗ್ರೆಸ್ನಲ್ಲಿ ಭವಿಷ್ಯ ಕಾಣಿಸಿದೆ ಅದಕ್ಕೆ ಹೋಗಿದ್ದಾರೆ, ನನಗೆ ಬಹಳ ದುಃಖ ಆಗ್ತಿದೆ, ಬಿಜೆಪಿಯಲ್ಲಿ ಸವಧಿಗೆ ಉತ್ತಮ ಭವಿಷ್ಯ ಇತ್ತು ಕೆಲವೊಮ್ಮೆ ರಾಜಕೀಯ ಸನ್ನಿವೇಶದಲ್ಲಿ ಇಂತಹ ಘಟನೆಗಳು ನಡೆಯುತ್ತದೆ ಎಂದು ಪ್ರತಿಕ್ರಿಯಿದ್ದಾರೆ.