ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು

ಸಂವಿಧಾನ ಶಿಲ್ಪಿಯ ಜಯಂತಿ ಇಂದು

ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ. ಜಗತ್ತಿನ ಎಲ್ಲ ಸಂವಿಧಾನಗಳನ್ನೂ ಆಳವಾಗಿ ಅಧ್ಯಯನ ಮಾಡಿ ಅವರು ಭಾರತಕ್ಕೆ ನೀಡಿದ ಶಕ್ತಿಶಾಲಿ ಸಂವಿಧಾನ ಅತ್ಯಂತ ದೊಡ್ಡದು, ಅತ್ಯಂತ ವಿಸ್ತಾರವಾದದು, ಅತ್ಯಂತ ಶ್ರೀಮಂತವಾದದ್ದು, ಅತ್ಯಂತ ಘನವಾದದ್ದು ಮತ್ತು ಅತ್ಯಂತ ತೂಕದ್ದು. ಅದಕ್ಕಾಗಿ ಭಾರತ ಬಾಬಾ ಸಾಹೇಬರನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಅಂತಹ ಅಂಬೇಡ್ಕರರ ಬದುಕು ಮತ್ತು ಬರವಣಿಗೆಗಳ ನಡುವೆ ಯಾವುದೇ ಅಂತರವಿರಲಿಲ್ಲ. ಆದ್ದರಿಂದ ಅವರ ಕೊಟೆಶನ್‌ಗಳು ತುಂಬ ಪವರಫುಲ್ ಆಗಿವೆ. ಅವರ ನೂರಾರು ಕೊಟೇಶನ್‌ಗಳು ಅವರ ಬದುಕಿನ ಹೋರಾಟ ಮತ್ತು ನಂಬಿಕೆಗಳ ಪ್ರತೀಕಗಳೇ ಆಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

1) ನಾವು ಮೊದಲನೆಯದಾಗಿ ಮತ್ತು ಕೊನೆಯದಾಗಿ ಭಾರತೀಯರು ಮತ್ತು ಭಾರತೀಯರೇ ಆಗಿದ್ದೇವೆ.































 
 

2) ಎಲ್ಲ ನೈತಿಕ ಮೌಲ್ಯಗಳ ಮೊತ್ತವು ಕೇವಲ ಪ್ರಾಮಾಣಿಕತೆಯೇ ಆಗಿದೆ.

3) ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಕಲಿಸುವ ಧರ್ಮವೇ ನಿಜವಾದ ಧರ್ಮ.

4) ವೈಚಾರಿಕ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ.

5) ಜೀವನ ದೀರ್ಘವಾಗಿ ಇರುವುದಕ್ಕಿಂತ ಘನವಾಗಿರಬೇಕು.

6) ಸಂವಿಧಾನ ದುರುಪಯೋಗ ಆಯಿತು ಅಂತಾದರೆ ನಾನೇ ಅದನ್ನು ಮೊದಲು ಸುಟ್ಟು ಹಾಕುತ್ತೇನೆ.

7) ಯಾವುದೇ ಸಮುದಾಯದ ಪ್ರಗತಿಯು ಆ ಸಮುದಾಯದ ಮಹಿಳೆಯರ ಸಾಧನೆಗಳಿಂದ ಅಳೆಯಲ್ಪಡುತ್ತದೆ.

8) ಅಸ್ಪೃಶ್ಯತೆ ಕೇವಲ ಅಸ್ಪೃಶ್ಯರನ್ನು ಮಾತ್ರ ನಾಶ ಮಾಡುವುದಲ್ಲ. ಅದು ಹಿಂದೂ ಧರ್ಮವನ್ನು ಮತ್ತು ರಾಷ್ಟ್ರವನ್ನು ಕೂಡ ನಾಶ ಮಾಡುತ್ತದೆ.

9) ನೀವು ಗೌರವಾನ್ವಿತ ಜೀವನವನ್ನು ಇಷ್ಟಪಡುತ್ತೀರಿ ಅಂತಾದರೆ ಬೇರೆಯವರಿಂದ ಸಹಾಯಪಡುವುದನ್ನು ಬಿಟ್ಟು ಸ್ವಾವಲಂಬಿಗಳಾಗಿ.

10) ಧರ್ಮವು ಮಾನವನಿಗಾಗಿ ಅಲ್ಲ ಮತ್ತು ಮಾನವನು ಧರ್ಮಕ್ಕಾಗಿ ಅಲ್ಲ.

11) ಸಂವಿಧಾನವು ಎಷ್ಟು ಉತ್ತಮ ಆಗಿದ್ದರೂ ಅದನ್ನು ಅನುಷ್ಠಾನ ಮಾಡುವ ವ್ಯಕ್ತಿಗಳು ಕೆಟ್ಟವರಾದರೆ ಸಂವಿಧಾನ ಕೆಟ್ಟದ್ದೇ ಆಗುತ್ತದೆ.

12) ಗಂಡ ಮತ್ತು ಹೆಂಡತಿಯ ಸಂಬಂಧಗಳು ಒಬ್ಬ ಅತ್ಯುತ್ತಮ ಗೆಳೆಯರ ಸಂಬಂಧ ಆಗಿರುತ್ತದೆ.

13) ಓರ್ವ ವ್ಯಕ್ತಿಯ ಶ್ರೇಷ್ಠತೆ ಆತನು ಎಷ್ಟು ಸಮಾಜದ ಸೇವಕನಾಗಿ ದುಡಿಯುತ್ತಾನೆ ಎಂಬ ಮಾನದಂಡವನ್ನು ಅವಲಂಬಿಸಿಕೊಂಡಿದೆ.

14) ಭಿಕ್ಷೆಯಿಂದ ಪಡೆದ ಸ್ವಾತಂತ್ರ್ಯಕ್ಕಿಂತ ಹೋರಾಟದಿಂದ ಪಡೆದ ಸ್ವಾತಂತ್ರ್ಯ ಶ್ರೇಷ್ಠ ಆದದ್ದು.

15) ಇತಿಹಾಸವನ್ನು ಓದದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ.

16) ಮಾನವನ ಅಸ್ತಿತ್ವದ ಅತ್ಯುನ್ನತ ಉದ್ದೇಶ ಏನೆಂದರೆ ತನ್ನ ಮನಸನ್ನು ಕೃಷಿ ಮಾಡುವುದೇ ಆಗಿದೆ.

17) ರಾಷ್ಟ್ರದ ಪ್ರಗತಿ ಸರಿಯಾದ ದಾರಿಯಲ್ಲಿ ವೇಗ ಪಡೆಯಬೇಕಾದರೆ ಸ್ತ್ರೀ ಮತ್ತು ಪುರುಷರ ಶಿಕ್ಷಣವು ಒಂದೇ ವೇಗದಲ್ಲಿ ಮುನ್ನಡೆಯಬೇಕು.

18) ಕಾನೂನು ಮತ್ತು ಶಿಸ್ತನ್ನು ಪಾಲಿಸುವ ಸಮಾಜಕ್ಕೆ ಹೊರಗಿನ ಔಷಧಿಯ ಅಗತ್ಯ ಇಲ್ಲ.

19) ಸಂವಿಧಾನ ಕೇವಲ ಒಬ್ಬ ವಕೀಲನ ಕೈಪಿಡಿ ಅಲ್ಲ. ಅದು ತನ್ನ ನಾಗರಿಕರಿಗೆ ನೀಡುವ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಗಳ ಪ್ರತಿಫಲನ ಆಗಿದೆ.

20) ಕಳೆದುಹೋದ ಹಕ್ಕುಗಳನ್ನು ಮನವಿಗಳಿಂದ ಹಿಂದೆ ಪಡೆಯಲು ಸಾಧ್ಯವೇ ಇಲ್ಲ. ಅದು ಶಕ್ತಿಶಾಲಿಯಾದ ಹೋರಾಟಗಳಿಂದ ಮಾತ್ರ ದೊರೆಯುತ್ತದೆ.

21) ಅಸ್ಪೃಶ್ಯತೆಮಾನವ ಸಮುದಾಯಕ್ಕೆ ಅಂಟಿದ ಅತಿ ದೊಡ್ಡ ಶಾಪ ಆಗಿದೆ.

22) ಶಿಕ್ಷಿತರಾಗಿ, ಸಂಘಟಿತರಾಗಿ ಮತ್ತು ಹೋರಾಟಗಾರರಾಗಿ.

ಈ ಕೊಟೇಶನಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಎಷ್ಟು ಸುಂದರ ಆಗಬಹುದು ಅಲ್ಲವೇ?
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು
.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top