ಪುತ್ತೂರು ಜಾತ್ರೆ : ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ರದ್ದು

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಎ.17ರಂದು ಜರುಗುವ ಬ್ರಹ್ಮರಥೋತ್ಸವದಂದು ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎ.17ರ ಸೋಮವಾರ ಕಿಲ್ಲೆ ಮೈದಾನದಲ್ಲಿನ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ.

ಪ್ರತಿ ಬಾರಿ ಬ್ರಹ್ಮರಥೋತ್ಸವದಂದು ಪುತ್ತೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆ ದಿನ ವಾಹನ ಪಾರ್ಕಿಂಗ್ ಗೆ ಕಿಲ್ಲೆ ಮೈದಾನ ಸಹಿತ ಹಲವಾರು ಮೈದಾನಗಳನ್ನು ಗುರುತಿಸಲಾಗುತಿತ್ತು. ಈ ಬಾರಿ ಎ.17ರಂದು ಸೋಮವಾರ ಆಗಿರುವುದರಿಂದ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಿದರೆ ವಾಹನ ಪಾರ್ಕಿಂಗ್ ಗೆ ತೊಂದರೆ ಆಗುವ ಸಾಧ್ಯತೆಯಿದ್ದು, ಹಿನ್ನೆಲೆಯಲ್ಲಿ ಸೋಮವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ.

ಸಾರ್ವಜನಿಕರು ಪುತ್ತೂರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top