ಪುತ್ತೂರು: ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯುತ್ತ) ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ರೆಡ್ ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ ರೇಂಜರ್, ವಿದ್ಯಾರ್ಥಿ ಸಂಘ, ರೋಟರಿ- ಕ್ಯಾಂಪ್ಕೋ ರಕ್ತ ನಿಧಿ ಕೇಂದ್ರ ಪುತ್ತೂರು, ರೋಟರಿ ರಕ್ತ ನಿಧಿ ಕೇಂದ್ರ, ಮಂಗಳೂರು ವೆನ್ಲಾಕ್ ಸರ್ಕಾರಿ ಆಸ್ಪತ್ರೆ, ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ರೋಟರಿಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಶೆಣೈ, ವೈದ್ಯಾಧಿಕಾರಿ ಡಾ.ಶರತ್ಕುಮಾರ್ ರಾವ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್, ಪುತ್ತೂರು ರೋಟರಿ ಕ್ಲಬ್ ಸದಸ್ಯ ವಿಕ್ಟರ್ ಮಾರ್ಟಿಸ್, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹ ಭಟ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಪಾಲ್ಗೊಂಡು ರಕ್ತದಾನ ಮಹತ್ವದ ಕುರಿತು ಮಾತನಾಡಿದರು. ಸುಮಾರು 156 ಯುನಿಟ್ ರಕ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಯಿತು.