ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಕೆಎಸ್‍ಆರ್ ಟಿಸಿ ಪುತ್ತೂರು ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಗಳ ವತಿಯಿಂದ ಅನ್ನಸಂತರ್ಪಣೆ ಜರಗಿತು.
ಅಷ್ಟಾವಧಾನ ಸೇವೆ :
ಜಾತ್ರೋತ್ಸವದ ಅಂಗವಾಗಿ ಶಿವನಿಗೆ ಇಷ್ಟವಾದ ಅಷ್ಟಾವಧಾನ ಸೇವೆ ಮಂಗಳವಾರ ರಾತ್ರಿ ನಡೆಯಿತು. ಋಗ್ವೇದ, ಯಜುರ್ವೇದ, ಸಾಮದೇದ, ಅಥರ್ವವೇದ, ಶಾಸ್ತ್ರಾ, ಪುರಾಣ, ಶಂಖನಾದ, ಪಂಚಾಂಗ, ಅಷ್ಟಕ, ಸಂಗೀತ, ವೀಣೆ, ನೃತ್ಯ, ಯಕ್ಷಗಾನ, ಗಾಯನ, ರುದ್ರವಾದ್ಯ, ವೀಣೆ, ಸ್ಯಾಕ್ಸೋಫೋನ್ ಮುಂತಾದ ಸರ್ವ ವಾದ್ಯಗಳ ಮೇಳೈಸುವಿಕೆಯೊಂದಿಗೆ ಅಷ್ಟಾವಧಾನ ಸೇವೆ ಜರಗಿತು.
ಬಳಿಕ ದೇವರ ಬಲಿ ಹೊರಟು ಉತ್ಸವ, ದೇವಸ್ಥಾನದ ವಠಾರದ ಕಟ್ಟೆಯಲ್ಲಿ ಪೂಜೆಗೊಂಡು ಬಳಿಕ ಶ್ರೀ ದೇವರು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ ಮಾಡಿದರು.