ಬೆಳ್ತಂಗಡಿ: ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದ ಉದ್ಯಮಿ ಪ್ರದೀಪ್ ದೇವರಗುಂಡ ಕುಶಾಲಪ್ಪ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡಿರುವ ಪ್ರದೀಪ್ ಕುಶಾಲಪ್ಪ , ಬೆಳ್ತಂಗಡಿ ತಾಲೂಕಿನ ಅನೇಕ ಸಮಸ್ಯೆಗಳತ್ತ ಗಮನ ಹರಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಕಲ್ಪದೊಂದಿಗೆ ಚುನಾವಣಾ ಆಖಾಡಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಎಂದರೆ ಶಿಸ್ತು, ನಿಯತ್ತು ಬೇಕು. ಜನಸೇವೆ ಮಾಡುವ ಏಕೈಕ ಗುರಿಯನ್ನು ರಾಜಕೀಯ ಹೊಂದಿರಬೇಕು. ಆದರೆ ಪ್ರಸ್ತುತ ರಾಜಕೀಯದಲ್ಲಿ ಇವೆಲ್ಲಾ ಕಣ್ಮರೆ ಆಗುತ್ತಿವೆ. ಆದ್ದರಿಂದ ಆ ಎಲ್ಲಾ ಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಪಣ ತೊಟ್ಟಿದ್ದಾರೆ. ಇದರೊಂದಿಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬುದು ಇವರ ಕನಸು. ಈ ಎಲ್ಲಾ ಕನಸು, ಆಶಯಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕ್ಕುತ್ತಿದ್ದಾರೆ.
ಉದ್ಯಮಿಯಾಗಿರುವ ಪ್ರದೀಪ್ ದೇವರಗುಂಡ ಅವರು, ಬೆಳ್ತಂಗಡಿಯಲ್ಲೇ ವಾಸ್ತವ್ಯ ಹೊಂದಿದ್ದಾರೆ. ಇವರ ತಂದೆ ಕುಶಾಲಪ್ಪ ಗೌಡ.