ಪುತ್ತೂರು: ಅನಾರೋಗ್ಯದ ವೇಳೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಗುರುತಿಸಿದ ಬಸವ, ಕೃತಜ್ಞತೆ ತೋರಿದ ಭಾವುಕ ಘಟನೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸೋಮವಾರ ರಾತ್ರಿ ನಡೆಯಿತು.
ಸೋಮವಾರದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭವಾಗಿದೆ. ದೇವರ ಉತ್ಸವ, ಸವಾರಿ ಸಂದರ್ಭ ಮುಂಭಾಗದಿಂದ ದೇವರ ಬಸವ ಸಾಗುತ್ತದೆ. ಹೀಗೆ ಸಾಗುವಾಗ ದಾರಿ ಮಧ್ಯೆ ಎದುರಾದ ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಅವರನ್ನು ಗುರುತಿಸಿ, ಕೃತಜ್ಞತಾ ಭಾವದಿಂದ ಪ್ರೀತಿ ತೋರಿಸಿತು.
ವೈದ್ಯ – ಬಸವನ ಪ್ರೀತಿಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದವರು ನಗರಸಭೆ ಸದಸ್ಯ ಪಿ.ಜಿ. ಜಗನ್ನೀವಾಸ್ ರಾವ್ ಅವರು.
