ಬೆಂಗಳೂರು : ಈ ವರ್ಷದ ಮೊದಲ ಸೂರ್ಯಗ್ರಹಣ ವೈಶಾಖ ಅಮವಾಸ್ಯೆ ದಿನವಾದ ಏ.20 ರಂದು ಸಂಭವಿಸಲಿದೆ. ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ ಹಿಂದೂ ಮಹಾಸಾಗರ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದಿದ್ದರೂ ಜ್ಯೋತಿಶ್ಶಾಸ್ತ್ರದ ಪ್ರಕಾರ ಅದರ ಪರಿಣಾಮ ಇದೆ.
2023ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸಲಿದೆ. ಈ ಪೈಕಿ ಮೊದಲ ಗ್ರಹಣ ಏ.20ರದ್ದು. ಗ್ರಹಣ ಬೆಳಗ್ಗೆ 7.04ಕ್ಕೆ ಶುರುವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳುತ್ತದೆ. ಎರಡನೇ ಸೂರ್ಯಗ್ರಹಣ ಮುಂಬರುವ ಅಕ್ಟೋಬರ್ 14ರಂದು ಸಂಭವಿಸಲಿದ್ದು, ಇದು ಭಾರತದಲ್ಲಿ ಗೋಚರಿಸುತ್ತದೆ.