ಡಾ. ನಝೀರ್‍ಸ್ ಡಯಾಬೆಟ್ಸ್ ಸೆಂಟರ್ 10ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಫಲಾನುಭವಿಗಳಿಗೆ ವಿವಿಧ ಉಚಿತ ಆರೋಗ್ಯ ತಪಾಸಣೆ

ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರ ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ ಎ.10 ರಂದು 10ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ ತನ್ನ ಪಾದಾರ್ಪಣೆ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸೋಮವಾರದಂದು ಫಲಾನುಭವಿಗಳಿಗೆ ವಿವಿಧ ಉಚಿತ ಆರೋಗ್ಯ ತಪಾಸಣೆಯನ್ನು ಕೈಗೊಂಡಿತ್ತು.

ಥೈರಾಯ್ಡ್ ಗ್ರಂಥಿಯ ತಪಾಸಣೆ, ಮಧುಮೇಹ ಪಾದ ರೋಗದ ತಪಾಸಣೆ ಮತ್ತು ಮಾಹಿತಿ, ನ್ಯೂರೋಟಚ್ ಮತ್ತು ಬಯೋಥೀಸಿಯೋಮೆಟ್ರಿ ಪರೀಕ್ಷೆ, ಮಧುಮೇಹಿಗಳಿಗಾಗಿರುವ ವಿಶೇಷ ಪಾದರಕ್ಷೆಗಳ ಪ್ರದರ್ಶನ ಮತ್ತು ದರ ಕಡಿತದ ಮಾರಾಟ, HBA1C ಬ್ಲಡ್ ಶುಗರ್ ತಪಾಸಣೆಯನ್ನು ಕ್ಲಿನಿಕ್‌ನಲ್ಲಿ ಉಚಿತವಾಗಿ ಮಾಡಲಾಯಿತು.































 
 

ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರು, ಮಧುಮೇಹದಿಂದ ಬರುವ ಪಾದದ ಸಮಸ್ಯೆಗಳು, ಅದನ್ನು ತಡೆಗಟ್ಟಲು ಸರಳ ವಿಧಾನಗಳ ಬಗ್ಗೆ ವಿವರಿಸಿದ್ದು, ಪ್ರತಿನಿತ್ಯ ಐದರಿಂದ ಹತ್ತು ನಿಮಿಷ ತಮ್ಮ ಪಾದಗಳನ್ನು ಸೂಕ್ಷ್ಮವಾಗಿ ಗಮನಿಸಿ ಉಪಯೋಗಿಸಿದಾಗ ಸಮಸ್ಯೆಗಳನ್ನು ತಡೆಗಟ್ಟಬಹುದು. ಅದೇ ರೀತಿ ಉಗುರು ಕತ್ತರಿಸುವಾಗ ಆಗಾಗ ಜಾಗ್ರತೆ ಮಾಡುವುದು, ತುಂಬಾ ಬಿಸಿ ಹಾಗೂ ಅತ್ಯಂತ ತಣ್ಣಗಿರುವ ನೀರಿನಲ್ಲಿ ಪಾದಗಳನ್ನು ತೊಳೆಯುವಾಗ ಜಾಗ್ರತೆ ವಹಿಸುವಂತಹುದು, ಸರಿಯಾದ ಪಾದರಕ್ಷೆಗಳನ್ನು ತೊಡುವುದು, ಪಾದರಕ್ಷೆಗಳನ್ನ ಆಯ್ಕೆ ಮಾಡುವಾಗ ಸರಿಯಾಗಿ ಹೊಂದಿಕೊಳ್ಳುವಂತಹ ಪಾದರಕ್ಷೆಗಳನ್ನು ಬಳಸಬೇಕು, ಎರಡು ಕಾಲಿನಲ್ಲಿ ವ್ಯತ್ಯಾಸವಿರುವಾಗ ಮತ್ತು ಕಾಲಿನ ಪಾದದ ಆಕೃತಿ ಬದಲಾಗಿದ್ದಾಗ ಅವರಿಗೆ ವಿಶೇಷವಾಗಿ ತಯಾರಿಸಿದ ಪಾದರಕ್ಷೆಗಳ ಅಗತ್ಯವಿರುತ್ತದೆ. ಅಂಥವರಿಗೆ ಅವರ ಪಾದದ ಅಳತೆ ಮಾಡಿಕೊಂಡು ಪಾದರಕ್ಷೆಗಳನ್ನು ತರಿಸಿ ಕೊಡಲಾಗುತ್ತದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಮಾತನಾಡಿ, ಡಾ.ನಝೀರ್ ಅಹಮದ್‌ರವರು ಪುತ್ತೂರು ಕ್ಲಬ್‌ನ ಸದಸ್ಯರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ತನ್ನ ಕ್ಲಿನಿಕ್‌ನಲ್ಲಿ ಫಲಾನುಭವಿಗಳಿಗೆ ಆರೋಗ್ಯಯುಕ್ತ ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ ಮಾತ್ರವಲ್ಲದೆ ಹಲವಾರು ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್, ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ನಿಯೋಜಿತ ಅಧ್ಯಕ್ಷ ಜೈರಾಜ್ ಭಂಡಾರಿಯವರು ಡಾ.ನಝೀರ್ ಅಹಮದ್‌ರವರ ಕ್ಲಿನಿಕ್‌ನಲ್ಲಿ ಜರಗುವ ವೈದ್ಯಕೀಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರೋಟರಿ ಸದಸ್ಯರಾದ ಅಬ್ದುಲ್ ಖಾದರ್, ಬಾಲಕೃಷ್ಣ ಆಚಾರ್ಯ, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಗಣೇಶ್ ಕಲ್ಲರ್ಪೆರವರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9481451929 ನಂಬರಿಗೆ ಹಾಗೂ ಆನ್‌ಲೈನ್ ಸಂದರ್ಶನಕ್ಕಾಗಿ Health Pix App-ಡಾಕ್ಟರ್‍ಸ್ ಕೋಡ್HPLX60932ಸಂಪರ್ಕಿಸಬಹುದಾಗಿದೆ ಎಂದು ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಲಿನಿಕ್ ಸೌಲಭ್ಯಗಳು:

ವಿವಿಧ ರೀತಿಯ ಮಧುಮೇಹಿಗಳಿಗೆ(ಟೈಪ್ 1, ಟೈಪ್ 2, GDM, Pancreatic DM) ವೈಯಕ್ತೀಕರಿಸಿದ ಚಿಕಿತ್ಸೆ, ಆಹಾರ ನಿಯಂತ್ರಣದ ಬಗ್ಗೆ ದೈನಂದಿನ ಸೂಕ್ತ ಮಾಹಿತಿ, ಫ್ರೀಸ್ಟೈಲ್Libre ಉಪಕರಣದಿಂದ ನಿರಂತರವಾಗಿ ರಕ್ತದಲ್ಲಿ ಸಕ್ಕರೆಯನ್ನು ನಿಗಾ ಇಡುವ ವ್ಯವಸ್ಥೆ, ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಮತ್ತು ಪ್ರತಿಯೊಬ್ಬರಿಗೂ ವೈಯಕ್ತಿಕ ಮೊಬೈಲ್ ಆಪ್, ಆನ್‌ಲೈನ್ ಸಂದರ್ಶನದ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಕ್ಲಿನಿಕ್ ಒದಗಿಸುತ್ತಿದೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top