ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ದೇವರು ಪೇಟೆ ಸವಾರಿಗೆ ತೆರಳುವ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇಂದಿನಿಂದ ಸಂಜೆ ವೇಳೆಗೆ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಉತ್ಸವ ನಡೆದು, ದೇವಸ್ಥಾನದ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆದು ಬಳಿಕ ಶ್ರೀ ದೇವರು ನಿಗದಿತ ಕಟ್ಟೆ ಪೂಜೆಗಾಗಿ ಪೇಟೆ ಸವಾರಿಗೆ ತೆರಳುವರು. ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ನಗರಸಭೆ ವತಿಯಿಂದ ಈ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ದೇವರು ಯಾವೆಲ್ಲಾ ಪ್ರದೇಶಕ್ಕೆ ಕಟ್ಟೆಪೂಜೆಗೆ ತೆರಳುತ್ತಿದ್ದಾರೆ ಆ ಪ್ರದೇಶದಲ್ಲಿ ರಸ್ತೆಗಳು ಸಹಿತ ಕಟ್ಟೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆದಿರುವ ಗಿಡ ಗಂಟಿಗಳು,, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ತೆರವುಗೊಳಸುವ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ.