ಕ್ಷೇತ್ರದ ಅಭಿವೃದ್ಧಿಯೇ  ಮಠಂದೂರು ಗೆಲುವಿಗೆ ಶ್ರೀ ರಕ್ಷೆ.

ಪುತ್ತೂರು: ಸಾವಿರಾರು ಕೋಟಿ ರೂಪಾಯಿಗಳ ಅನುದಾನದ ಮೂಲಕ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗಾಗಿ ಸಾಕಷ್ಟು ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಶಾಸಕ ಸಂಜೀವ ಮಠಂದೂರುರವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯುವುದು ನಿಚ್ಚಳವಾಗಿದೆ.ಪುತ್ತೂರು ಕ್ಷೇತ್ರ ಬಿಜೆಪಿ ಸೇರಿದಂತೆ ಜಿಲ್ಲಾ ಬಿಜೆಪಿಯಲ್ಲಿ ಸುದೀರ್ಘ ಕಾಲ ಪಕ್ಷ ಸಂಘಟನೆಗಾಗಿ  ದುಡಿದಿರುವ ಹಾಲಿ ಶಾಸಕ ಮಠಂದೂರು ಪಕ್ಷದ ಶಿಸ್ತಿನ ಸಿಪಾಯಿಯೂ ಹೌದು. ತನ್ನ ಜೀವನದುದ್ದಕ್ಕೂ ಪಕ್ಷ ಸಂಘಟನೆಗಾಗಿ ಸಾಕಷ್ಟು ಸಮಯಗಳನ್ನು ಮೀಸಲಿರಿಸಿ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು.ತಾನು ಶಾಸಕನಾಗುವುದಕ್ಕಿಂತಲೂ ಮುಂಚೆಯೇ ಪಕ್ಷದಲ್ಲಿ ಬೇರೆ ಶಾಸಕರಾಗಿದ್ದಾಗಲೂ ಕ್ಷೇತ್ರದ ಅಭಿವೃದ್ಧಿ ಕಾರ್ಯ, ಸಹಕಾರ ಕ್ಷೇತ್ರಕ್ಕೆ ಅನುದಾನವನ್ನು ಒದಗಿಸಿದವರು.

ಸಂಜೀವ ಮಠಂದೂರುರವರು ಶಾಸಕರಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 1,200 ಕೋಟಿ ರೂಪಾಯಿಗಳ ಭರಪೂರ ಅನುದಾನ ದೊರಕಿದ್ದು, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಕ್ಷೇತ್ರದ ಬಹುತೇಕ ರಸ್ತೆಗಳು ಕಾಂಕ್ರೀಟಿಕರಣ,ಡಾಮರೀಕರಣಗೊಂಡಿರುವುದು,ಕ್ಷೇತ್ರದಲ್ಲಿ ಹಲವಾರು ಕಿಂಡಿ ಅಣೆಕಟ್ಟು ಸಮೇತ ಸೇತುವೆಗಳು, ಜಲಸಿರಿ ಯೋಜನೆಯಡಿ ಗ್ರಾಮ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ದೇವಾಲಯ, ಭಜನಾ ಮಂದಿರಗಳ ಜೀರ್ಣೋದ್ಧಾರಕ್ಕೆ ಕೋಟ್ಯಾಂತರ ರೂಪಾಯಿಗಳ ಅನುದಾನ, ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಆದ್ಯತೆ, ವಿದ್ಯುತ್ ಸಂಪರ್ಕ, ಅನುದಾನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಮಾನ್ಯ ಶಾಸಕರಿಗೆ ಸಲ್ಲುತ್ತದೆ.

50 ಕೋಟಿ ರೂಪಾಯಿಗಳ ಡ್ಯಾಂ ನಿರ್ಮಾಣ, ಸುಸಜ್ಜಿತ ನ್ಯಾಯಾಲಯದ ಸಂಕೀರ್ಣ, ಧಾರ್ಮಿಕ ಕ್ಷೇತ್ರಗಳ ತಡೆಗೋಡೆಗಳಿಗೆ ಆರ್ಥಿಕ ನೆರವು, ಸರಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ, ಸ್ವತಃ ಸರಕಾರದ ಅನುದಾನದಲ್ಲಿ  3 ಆಕ್ಸಿಜನ್ ಪ್ಲಾಂಟ್ ನಿರ್ಮಾಣ, ಬಡ ಕುಟುಂಬಗಳಿಗೆ 94 ಸಿ,94 ಸಿಸಿ ಹಕ್ಕುಪತ್ರಗಳ ಮೂಲಕ ನಿವೇಶನ, ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಹೀಗೆ ಸಾವಿರಾರು ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಸಲ್ಲುತ್ತದೆ.































 
 

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ರೈತಾಪಿ ವರ್ಗ, ಕೃಷಿ ಕುಟುಂಬಗಳ ಧ್ವನಿಯಾಗಿ ರಾಜ್ಯದ ಶಕ್ತಿ ಸೌಧ ವಿಧಾನ ಸೌಧದಲ್ಲಿ ಧ್ವನಿಯೆತ್ತಿದ ಕೀರ್ತಿ, ಇವುಗಳ ಪೈಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ, ಕುಮ್ಕಿ ಹಕ್ಕುಗಳ ಸಮಸ್ಯೆ, ಭೂ ಪರಿವರ್ತನೆ ಸರಳೀಕರಣ ಇಂತಹ ಸೂಕ್ಷ್ಮ ವಿಚಾರಗಳನ್ನು ಶಕ್ತಿ ಸೌಧದಲ್ಲಿ ಧ್ವನಿಯೆತ್ತಿ  ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ರಾಜ್ಯದ ಜನತೆಗೆ ಅನುಕೂಲ ಒದಗಿಸಿದ್ದರು. ಸಂಘಟನೆಯ ಶಕ್ತಿ ಕೇಂದ್ರವಾಗಿರುವ ಪುತ್ತೂರಿನಲ್ಲಿ ಅಭಿವೃದ್ಧಿಯ ಜೊತೆಗೆ ಪಕ್ಷದ ಸಂಘಟನೆಗೂ ಒತ್ತು ನೀಡಿರುವುದು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲೂ ಯಶಸ್ವಿಯಾಗಿದ್ದಾರೆ.

✍🏻 ಮತದಾರ  ಪುತ್ತೂರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top